. ಈ ವೇಳೆ ಕೆರಳಿದ ರಮ್ಯಾ ಅಲ್ಲಿದ್ದವರಿಗೆ ಸುಪ್ರೀಂಕೋರ್ಟ್ ನಲ್ಲಿ ನಿಮ್ಮ ತಾತ ನಿಂತಿದ್ದನಾ ಅಂತೇಳಿ ಮತ್ತೆ ಜನರ ಆಕ್ರೋಶ ಕೆರಳಿಸಿದ್ರು.

ಇನ್ನು ಮಾಜಿ‌ ಸಂಸದೆ ರಮ್ಯಾ ಕೂಡ ಬೆಂಗಳೂರಿನಿಂದ ರೈಲಿನ ಮೂಲಕ ಮಂಡ್ಯಕ್ಕೆ ಬಂದು ಮಂಡ್ಯದ ಮನೆಗೆ ಭೇಟಿ ನೀಡಿದ್ರು. ಅಲ್ಲಿಂದ ಆಟೋ ಮೂಲಕ ಮಂಡ್ಯದ ಮಾರುಕಟ್ಟೆಗೆ ಭೇಟಿ ನೀಡಿ ಪರೀಶೀಲನೆ ನಡೆಸುದ್ರು. ಈ ವೇಳೆ ಅಲ್ಲಿನ ಕೆಲ ವರ್ತಕರು ರಮ್ಯಾ ಆಗಮಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮೋದಿ ಪರ ಜೈಕಾರ ಕೂಗೋ ಮೂಲಕ ಕೆರಳಿಸಿದ್ರು.ಅಲ್ಲದೆ ಕಾವೇರಿ ಹೋರಾಟದಲ್ಲಿ ಮಂಡ್ಯಕ್ಕೆ ಬರದ ರಮ್ಯಾ ಬಗ್ಗೆ ಆಕ್ರೋಶದ ಮಾತನಾಡಿದ್ರು. ಈ ವೇಳೆ ಕೆರಳಿದ ರಮ್ಯಾ ಅಲ್ಲಿದ್ದವರಿಗೆ ಸುಪ್ರೀಂಕೋರ್ಟ್ ನಲ್ಲಿ ನಿಮ್ಮ ತಾತ ನಿಂತಿದ್ದನಾ ಅಂತೇಳಿ ಮತ್ತೆ ಜನರ ಆಕ್ರೋಶ ಕೆರಳಿಸಿದ್ರು. ಇಂದ್ರಿದ ಹುಡ್ಗ ಕೂಡ ಹೌದು ಮೇಡಮ್ ನಮ್ಮ ತಾತ ಮಾದೇಗೌಡ್ರು ನಿಂತಿದ್ರು ನಿಮ್ಮ ಅಪ್ಪ ಏನಾದ್ರು ಬಂದಿದ್ರಾ ಅಂತಾ ಎಂದಿದ್ದು ಮಾತಿನ ವಾಗ್ವಾದಕ್ಕೆ ಕಾರಣವಾಯ್ತು. ನಂತ್ರ ರಮ್ಯ ಆಟೋದಲ್ಲಿ ಹೊರಡುತ್ತಿದ್ದಂತೆ ರಮ್ಯಾ ಗೆ ಧಿಕ್ಕಾರ ಕೂಗಿ ಜನರು ಆಕ್ರೋಶ ವ್ಯಕ್ತಪಡಿಸಿದ್ರು.