ಸದಾ ಚಟುವಟಿಕೆಗಳಲ್ಲಿ ಬ್ಯುಸಿಯಾಗಿರುವ ಪೇಜಾವರ ಶ್ರೀಗಳು ಕಾಲು‌ಜಾರಿ‌ಬಿದ್ದು ಗಾಯಗೊಂಡಿದ್ದಾರೆ. ನಿನ್ನೆ ಮುಂಜಾನೆ ಪೂಜೆ ವೇಳೆ ಶ್ರೀಗಳು ಕಾಲುಜಾರಿ ಬಿದ್ದಿದ್ದಾರೆ. ಈ ವೇಳೆ ಶ್ರೀಗಳ ಭುಜಕ್ಕೆ ಸಣ್ಣ ಗಾಯವಾಗಿದ್ದು, ತಕ್ಷಣ ವೈದ್ಯರು ಬಂದು ಚಿಕಿತ್ಸೆ ನೀಡಿದ್ದಾರೆ.
ಉಡುಪಿ(ಜೂ.29): ಸದಾ ಚಟುವಟಿಕೆಗಳಲ್ಲಿ ಬ್ಯುಸಿಯಾಗಿರುವ ಪೇಜಾವರ ಶ್ರೀಗಳು ಕಾಲುಜಾರಿಬಿದ್ದು ಗಾಯಗೊಂಡಿದ್ದಾರೆ. ನಿನ್ನೆ ಮುಂಜಾನೆ ಪೂಜೆ ವೇಳೆ ಶ್ರೀಗಳು ಕಾಲುಜಾರಿ ಬಿದ್ದಿದ್ದಾರೆ. ಈ ವೇಳೆ ಶ್ರೀಗಳ ಭುಜಕ್ಕೆ ಸಣ್ಣ ಗಾಯವಾಗಿದ್ದು, ತಕ್ಷಣ ವೈದ್ಯರು ಬಂದು ಚಿಕಿತ್ಸೆ ನೀಡಿದ್ದಾರೆ.
ಗಾಯವನ್ನು ಲೆಕ್ಕಿಸದ ಶ್ರೀಗಳು ಎಂದಿನಂತೆ ನಿರಂತರ ಚಟುವಟಿಕೆಯಿಂದಿದ್ದಾರೆ. ಅಷ್ಟೇ ಅಲ್ಲದೇ ಲಕ್ಷ ತುಳಸಿ ಅರ್ಚನೆಯಲ್ಲಿ ಕೂಡ ಭಾಗಿಯಾಗಿದ್ದಾರೆ. ಪಾಠ, ಪ್ರವಚನ, ಪೂಜೆಯಲ್ಲಿಯೂ ಬ್ಯುಸಿಯಾಗಿದ್ದಾರೆ. ಸ್ವಾಮೀಜಿ ಆರೋಗ್ಯದಿಂದಿದ್ದಾರೆ ಎಂದು ಸ್ವಾಮಿಜಿ ಆಪ್ತರು ಹೇಳಿದ್ದಾರೆ.
