ರಾಮ ಮಂದಿರಕ್ಕೆ ದಲಿತ ವ್ಯಕ್ತಿಯಿಂದ ಅಡಿಗಲ್ಲು: ಪೇಜಾವರ ಶ್ರೀ

Pejavara Shri talk about Rama Mandira
Highlights

ಉಡುಪಿ ಮಠಕ್ಕೆ ಸಿದ್ದರಾಮಯ್ಯ ಭೇಟಿ ನೀಡದ ವಿಚಾರವಾಗಿ ಪೇಜಾವರ ಶ್ರೀಗಳು ಮಾತನಾಡುತ್ತಾ,  ಇವರೊಬ್ಬರೇ  ಮಠಕ್ಕೆ ಬಂದಿಲ್ಲ. ಮಠಕ್ಕೆ ಯಾರು ಬೇಕಾದರೂ ಬರಬಹುದು. ಕುಮಾರಸ್ವಾಮಿ, ಪರಮೇಶ್ವರ, ದೇವೇಗೌಡರು ಸೇರಿದಂತೆ ಸಾಕಷ್ಟು ಮಂತ್ರಿಗಳು ಬಂದಿದ್ದಾರೆ.  ಸಿದ್ದರಾಮಯ್ಯ ಮಾತ್ರ ಬಂದಿಲ್ಲ. ಅವರೊಬ್ಬರೇ ಕಾಂಗ್ರೆಸ್ ನವರಲ್ಲ. ಕಾಂಗ್ರೆಸ್ ನಲ್ಲಿ ಬೇಕಾದಷ್ಟು ಜನರಿದ್ದಾರೆ. ಎಲ್ಲರೂ ನಮಗೆ ಬೇಕಾದವರೆ ಎಂದು  ಹೇಳಿದ್ದಾರೆ. 

ಬಾಗಲಕೋಟೆ (ಜು. 11): ರಾಮಮಂದಿರಕ್ಕೆ ಈಗಾಗಲೇ ಅಡಿಗಲ್ಲು ಹಾಕಲಾಗಿದೆ. ನಾವೇ ಇದ್ದೇವೆ.   ಬಹಳ ವರ್ಷದ ಹಿಂದೆಯೇ ಶಿಲಾನ್ಯಾಸ ಮಾಡಲಾಗಿದೆ‌. ರಾಮಮಂದಿರಕ್ಕೆ  ಅಡಿಗಲ್ಲು  ದಲಿತ ವ್ಯಕ್ತಿಯಿಂದ ಹಾಕಿಸಲಾಗಿದೆ.  ರಾಮಮಂದಿರ ನಿರ್ಮಾಣವಾಗೋದು ಒಂದೇ ಬಾಕಿ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ. 

ಕಟ್ಟಡ ನಿರ್ಮಾಣದ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ರಾಮಮಂದಿರ ಪ್ರಕರಣಕ್ಕೆ  ಸುಪ್ರೀಂ ಕೋರ್ಟ್’ನ ತಡೆಯಿದೆ. ಕಾನೂನು ಮೀರಿ ಹೋಗಲಿಕ್ಕೆ ಬರುವುದಿಲ್ಲ.  ಈಗಾಗಲೇ ರಾಮಮಂದಿರಕ್ಕೆ ನೀಡಿರುವ ಜಾಗ ಕಡಿಮೆಯಿದೆ. ಇದು ಕೂಡಾ ಇತ್ಯರ್ಥವಾಗಬೇಕಿದೆ ಎಂದು ಶ್ರೀಗಳು ಹೇಳಿದ್ದಾರೆ. 

ಇದೇ ವೇಳೆ  ಶಿರೂರ ಶ್ರೀ ಪೀಠದಿಂದ ಕೆಳಗಿಳಿಸುವ ವಿಚಾರವಾಗಿ ಮಾತನಾಡುತ್ತಾ,  ಇದು ನೈತಿಕ ದೃಷ್ಟಿಯಿಂದ ಮಾಡಿದ್ದು.  ಇದು ಅಷ್ಟಮಠಕ್ಕೆ ಸಂಬಂಧಿಸಿದ ವಿಷಯ. ಬಹಿರಂಗ ಚರ್ಚೆ ಅಗತ್ಯವಿಲ್ಲ. ನಾವು ಅಷ್ಟಮಠದವರು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಪೇಜಾವರರು ಹೇಳಿದ್ದಾರೆ. 

ಉಡುಪಿ ಮಠಕ್ಕೆ ಸಿದ್ದರಾಮಯ್ಯ ಭೇಟಿ ನೀಡದ ವಿಚಾರವಾಗಿ ಮಾತನಾಡುತ್ತಾ,  ಇವರೊಬ್ಬರೇ  ಮಠಕ್ಕೆ ಬಂದಿಲ್ಲ. ಮಠಕ್ಕೆ ಯಾರು ಬೇಕಾದರೂ ಬರಬಹುದು. ಕುಮಾರಸ್ವಾಮಿ, ಪರಮೇಶ್ವರ, ದೇವೇಗೌಡರು ಸೇರಿದಂತೆ ಸಾಕಷ್ಟು ಮಂತ್ರಿಗಳು ಬಂದಿದ್ದಾರೆ.  ಸಿದ್ದರಾಮಯ್ಯ ಮಾತ್ರ ಬಂದಿಲ್ಲ. ಅವರೊಬ್ಬರೇ ಕಾಂಗ್ರೆಸ್ ನವರಲ್ಲ. ಕಾಂಗ್ರೆಸ್ ನಲ್ಲಿ ಬೇಕಾದಷ್ಟು ಜನರಿದ್ದಾರೆ. ಎಲ್ಲರೂ ನಮಗೆ ಬೇಕಾದವರೆ ಎಂದು ಶ್ರೀಗಳು ಹೇಳಿದ್ದಾರೆ. 

loader