ನಾಗರಿಕರು ಮತ್ತು ಸಣ್ಣ ಉದ್ದಿಮೆದಾರರು ಪಾವತಿ ಬ್ಯಾಂಕ್‌ಗಳ ತಮ್ಮ ಖಾತೆಗಳಲ್ಲಿ 1ಲಕ್ಷದವರೆಗೂ ಠೇವಣಿ ಮಾಡಬಹುದಾಗಿದೆ
ನವದೆಹಲಿ(ಡಿ.04): ಪಾವತಿ ಬ್ಯಾಂಕ್ ಆಗಿ ಕಾರ್ಯ ನಿರ್ವಹಿಸಲು ಭಾರತೀಯ ರಿಜರ್ವ್ ಬ್ಯಾಂಕ್ ಮಾನ್ಯತೆ ನೀಡಿದೆ ಎಂದು ಪೇಟಿಎಂ ಹೇಳಿಕೊಂಡಿದೆ. ಫೆಬ್ರವರಿಯಿಂದ ಪೇಟಿಎಂ ಪಾವತಿ ಬ್ಯಾಂಕ್ ಕಾರ್ಯಾರಂಭ ಮಾಡಲಿದೆ. ನಾಗರಿಕರು ಮತ್ತು ಸಣ್ಣ ಉದ್ದಿಮೆದಾರರು ಪಾವತಿ ಬ್ಯಾಂಕ್ಗಳ ತಮ್ಮ ಖಾತೆಗಳಲ್ಲಿ 1ಲಕ್ಷದವರೆಗೂ ಠೇವಣಿ ಮಾಡಬಹುದಾಗಿದೆ. ‘‘ಪಾವತಿ ಬ್ಯಾಂಕ್ ಆಗಿ ಕಾರ್ಯ ನಿರ್ವಹಿಸಲು ಆರ್ಬಿಐ ಅನುಮತಿ ನೀಡಿದೆ. ಹಾಗಾಗಿ, ನಮ್ಮ ಸೇವೆಯನ್ನು ಸಾರ್ವಜನಿಕರಿಗೆ ನೀಡಲು ನಾವು ಕಾತುರರಾಗಿದ್ದೇವೆ,’’ ಎಂದು ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಹೇಳಿದ್ದಾರೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ಫೆಬ್ರವರಿಯಲ್ಲಿ ಪೇಟಿಎಂನ ಪಾವತಿ ಬ್ಯಾಂಕ್ನ ಮೊದಲ ಶಾಖೆ ಕಾರ್ಯಾರಂಭಿಸಲಿದೆ ಎಂದು ಅವರು ತಿಳಿಸಿದ್ದಾರೆ.
