ರಾಜ್ಯಸಭೆಯು ಮಾಡಿರುವ ತಿದ್ದುಪಡಿಗಳು ಸ್ವೀಕಾರಾರ್ಹವಲ್ಲವೆಂದು ಈ ಸಂದರ್ಭದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ನವದೆಹಲಿ (ಮಾ.30): ಹಣಕಾಸು ಮಸೂದೆ-2017'ಗೆ ರಾಜ್ಯಸಭೆಯು ಮಾಡಿರುವ ತಿದ್ದುಪಡಿಗಳನ್ನು ಪರಿಗಣಿಸದೇ ಲೋಕಸಭೆಯು ಮಸೂದೆಗೆ ಇಂದು ಅನುಮೋದನೆ ನೀಡಿದೆ.
ರಾಜ್ಯಸಭೆಯು ಮಾಡಿರುವ ತಿದ್ದುಪಡಿಗಳು ಸ್ವೀಕಾರಾರ್ಹವಲ್ಲವೆಂದು ಈ ಸಂದರ್ಭದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ರಾಜ್ಯಸಭೆಯು ಮಾಡಿರುವ ತಿದ್ದುಪಡಿಗಳನ್ನು ಬೆಂಬಲಿಸಿ ಮಾತನಾಡಿದ ಕಾಂಗ್ರೆಸ್ ಸಂಸದ ದೀಪೇಂದ್ರ ಹೂಡಾ, ಬೇರೆ ಬೇರೆ ಕಾನೂನಗಳಿಗೆ ಹಣಕಾಸು ಮಸೂದೆಯ ಮೂಲಕ ತಿದ್ದುಪಡಿ ಮಾಡುವ ಸರ್ಕಾರದ ಪ್ರಯತ್ನವನ್ನು ವಿರೋಧಿಸಿದರು.
ರಾಜಕೀಯ ಪಕ್ಷಗಳ ದೇಣಿಗೆಗೆ ಸಂಬಂಧಿಸಿ ಪ್ರತ್ಯೇಕ ಕಾನೂನನ್ನು ಜಾರಿಗೊಳಿಸಬೇಕೆಂದು ಅವರು ಆಗ್ರಹಿದರು.
ರಾಜ್ಯಸಭೆಯು ನಿನ್ನೆ ಐದು ತಿದ್ದುಪಡಿಗಳೊಂದಿಗೆ ಹಣಕಾಸು ಮಸೂದೆಯನ್ನು ಹಿಂತಿರುಗಿಸಿತ್ತು.