ನವದೆಹಲಿ[ಜು.09]: ಬ್ಯಾಂಕ್‌ ಖಾತೆ ತೆರೆಯಲು ಮತ್ತು ಮೊಬೈಲ್‌ ಸಿಮ್‌ ಕಾರ್ಡ್‌ ಪಡೆಯಲು ಆಧಾರ್‌ ಅನ್ನು ಕಡ್ಡಾಯ ಎಂಬುದರ ಬದಲಾಗಿ ಐಚ್ಛಿಗೊಳಿಸುವ ಮಸೂದೆಗೆ ಸಂಸತ್‌ ಸೋಮವಾರ ಅನುಮೋದನೆ ನೀಡಿದೆ.

ಆಧಾರ್‌ ಮತ್ತು ಇತರ ತಿದ್ದುಪಡಿ ಮಸೂದೆ- 2019ಕ್ಕೆ ರಾಜ್ಯಸಭೆಯಲ್ಲಿ ಧ್ವನಿ ಮತದಿಂದ ಅನುಮೋದನೆ ನೀಡಲಾಯಿತು. ಈ ಮಸೂದೆಗೆ ಜುಲೈ 4ರಂದು ಲೋಕಸಭೆ ಅನುಮೋದನೆ ನೀಡಿತ್ತು. ಹೊಸ ಮಸೂದೆ ಅನ್ವಯ ಖಾಸಗಿ ಕಂಪನಿಗಳು ಆಧಾರ್‌ ದತ್ತಾಂಶ ಸೋರಿಕೆ ಮಾಡಿದರೆ ಅಥವಾ ನಿಯಮಗಳನ್ನು ಉಲ್ಲಂಘಿಸಿದರೆ 1 ಕೋಟಿ ರು.ವರೆಗೂ ದಂಡ ಹಾಗೂ ಜೈಲು ಶಿಕ್ಷೆ ವಿಧಿಸುವುದಕ್ಕೂ ಅವಕಾಶ ಇದೆ.

ಹೀಗಾಗಿ ಈ ಮಸೂದೆ ಕಾಯ್ದೆಯಾಗಿ ಜಾರಿಯಾಗಲು ರಾಷ್ಟ್ರಪತಿಗಳ ಅಂಗೀಕಾರವೊಂದೇ ಬಾಕಿ ಉಳಿದಿದೆ.