ಹುಳು ಹಿಡಿದಿದ್ದ ಗೋಧಿ , ಅಕ್ಕಿ ನುಚ್ಚು, ಹೆಸರುಬೇಳೆಗಳಿಂದ ತಯಾರಿಸಿದ ಕಳಪೆ ಆಹಾರವನ್ನು ಮಕ್ಕಳಿಗೆ ನೀಡುತ್ತಿದ್ದ ಅಂಗನವಾಡಿಗೆ, ಪೋಷಕರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಿಪಡಿಸಿದ ಘಟನೆ ಹಾಸನದಲ್ಲಿ ನಡೆದಿದೆ.  ಹಾಸನ ಜಿಲ್ಲೆ  ಹೊಳೆನರಸೀಪುರದ ಅಂಬೇಡ್ಕರ್ ನಗರದ ಅಂಗನವಾಡಿಯಲ್ಲಿ ಮಕ್ಕಳಿಗೆ ಈ ರೀತಿಯ ಕಳಪೆ ಆಹಾರ ನೀಡಲಾಗುತ್ತಿತ್ತು. ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು.

ಹಾಸನ: ಹುಳು ಹಿಡಿದಿದ್ದ ಗೋಧಿ , ಅಕ್ಕಿ ನುಚ್ಚು, ಹೆಸರುಬೇಳೆಗಳಿಂದ ತಯಾರಿಸಿದ ಕಳಪೆ ಆಹಾರವನ್ನು ಮಕ್ಕಳಿಗೆ ನೀಡುತ್ತಿದ್ದ ಅಂಗನವಾಡಿಗೆ, ಪೋಷಕರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಿಪಡಿಸಿದ ಘಟನೆ ಹಾಸನದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಾಸನ ಜಿಲ್ಲೆ ಹೊಳೆನರಸೀಪುರದ ಅಂಬೇಡ್ಕರ್ ನಗರದ ಅಂಗನವಾಡಿಯಲ್ಲಿ ಮಕ್ಕಳಿಗೆ ಈ ರೀತಿಯ ಕಳಪೆ ಆಹಾರ ನೀಡಲಾಗುತ್ತಿತ್ತು. ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು.

ಇದರಿಂದ ಕುಪಿತರಾದ ಪೋಷಕರು ಅಂಗನವಾಡಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಹುಳುಮಿಶ್ರಿತ ಆಹಾರ ಪದಾರ್ಥಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ಸಿಡಿಪಿಓ ಕುಮಾರ್ ಪೋಷಕರನ್ನುಸಮಾಧಾನಪಡಿಸಿ , ಬೇಜವಾಬ್ದಾರಿ ತೋರಿದ ಅಂಗನವಾಡಿ ಸಿಬ್ಬಂದಿ ಮೇಲೆ ಕ್ರಮವಹಿಸುವ ಭರವಸೆ ನೀಡಿದ್ದಾರೆ.