ಪನಾಮಾ ಪೇಪರ್ಸ್ ಹಗರಣದ ಮೂಲಕ ಮಾಲ್ಟಾ ತೆರಿಗೆ ಸ್ವರ್ಗ ರಾಷ್ಟ್ರಗಳ ಜೊತೆಗಿನ ನಂಟನ್ನು ಬಹಿರಂಗಪಡಿಸಿದ್ದ ತನಿಖಾ ಪತ್ರಕರ್ತೆಯೊಬ್ಬರು ಬಾಂಬ್ ದಾಳಿಯಲ್ಲಿ ಹತ್ಯೆ ಯಾಗಿದ್ದಾರೆ.
ವಲ್ಲೆಟ್ಟಾ(ಅ.18): ಪನಾಮಾ ಪೇಪರ್ಸ್ ಹಗರಣದ ಮೂಲಕ ಮಾಲ್ಟಾ ತೆರಿಗೆ ಸ್ವರ್ಗ ರಾಷ್ಟ್ರಗಳ ಜೊತೆಗಿನ ನಂಟನ್ನು ಬಹಿರಂಗಪಡಿಸಿದ್ದ ತನಿಖಾ ಪತ್ರಕರ್ತೆಯೊಬ್ಬರು ಬಾಂಬ್ ದಾಳಿಯಲ್ಲಿ ಹತ್ಯೆ ಯಾಗಿದ್ದಾರೆ.
ದಾಫ್ನೆ ಕರ್ವಾನಾ ದಾಳಿಯಲ್ಲಿ ಹತ್ಯೆಯಾದವರು. ಮೊಸ್ತಾದಲ್ಲಿರುವ ಮನೆಯಿಂದ ಕಾರಿನಲ್ಲಿ ಹೊರಟಿದ್ದಾಗ ಬಾಂಬ್ ಸ್ಫೋಟಗೊಂಡಿದ್ದು, ಕಾರು ಛಿದ್ರಗೊಂಡಿದೆ. ಪತ್ರಕರ್ತೆ ದಾಫ್ನೆ ಹತ್ಯೆಯನ್ನು ಪ್ರಧಾನಿ ಜೊಸೆಫ್ ಮಸ್ಕಾಟ್ ಖಂಡಿಸಿದ್ದಾರೆ. ‘ದಾಫ್ನೆ ಅವರು ತಮ್ಮ ಟೀಕಾಕಾರರಲ್ಲಿ ಒಬ್ಬರಾಗಿದ್ದರು. ಆದರೆ, ರಾಜಕೀಯವಾಗಿ ಮತ್ತು ವೈಯಕ್ತಿಕವಾಗಿ ಅವರ ಹತ್ಯೆಯನ್ನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.
2016ರಲ್ಲಿ ಬಹಿರಂಗಗೊಂಡ ಪನಾಮಾ ಪೇಪರ್ಸ್ ಹಗರಣದಲ್ಲಿ ಮಾಲ್ಟಾಗೆ ಸಂಬಂಧಿಸಿದ ಸಂಗತಿಗಳನ್ನು ದಾಫ್ನೆ ಅವರು ಬಹಿರಂಗಪಡಿಸಿದ್ದರು. ಸರ್ಕಾರಿ ಅಧಿಕಾರಿಗಳು ಅಜರ್ ಬೈಜಾನ್ ದೇಶದಿಂದ ಹಣ ಪಡೆದಿದ್ದ ಬಗ್ಗೆ ದೇಶದ ಇಂಧನ ಸಚಿವರಿಗೆ ಪತ್ರ ಬರೆದಿದ್ದರು.
