ಪಣಜಿ [ಏ. 28]  ಪಣಜಿ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡಿದ್ದು ಅಚ್ಚರಿ ಮೂಡುವಂತೆ ಮಾಡಿದೆ.  ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ಪುತ್ರನಿಗೆ ಟಿಕೆಟ್ ನೀಡದೆ ಸಿದ್ಧಾರ್ಥ್‌ ಕುಂಕಲೇನಕರ್ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.

ದಿ.ಮನೋಹರ್ ಪರಿಕ್ಕರ್ ಪುತ್ರ ಉತ್ಪಾಲ್ ಪರಿಕ್ಕರ್ ಅವರಿಗೆ ಟಿಕೆಟ್ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ಸಿದ್ಧಾರ್ಥ್‌ ಕುಂಕಲೇನಕರ್ ಎರಡು ಬಾರಿ ಪಣಜಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಈಗ ಪುನಃ ಅವರಿಗೆ ಟಿಕೆಟ್ ನೀಡಲಾಗಿದೆ.  ಸಿದ್ಧಾರ್ಥ್‌ ಕುಂಕಲೇನಕರ್ ಅವರು 2017ರ ಮೇ 10ರಂದು ಮನೋಹರ್ ಪರಿಕ್ಕರ್ ವಿಧಾನಸಭೆಗೆ ಆಯ್ಕೆಯಾಗಲು ಅವಕಾಶ ನೀಡುವುದಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದ್ದರಿಂದ ಈಗ ಉಪ ಚುನಾವಣೆಯಲ್ಲಿಯೂ ಅವರಿಗೆ ಟಿಕೆಟ್ ನೀಡಲಾಗಿದೆ.

ಮನೋಹರ್ ಪರ್ರಿಕರ್‌ ಪುತ್ರರು ರಾಜಕೀಯಕ್ಕೆ

ಕೇಂದ್ರದ ರಕ್ಷಣಾ ಸಚಿವರಾಗಿ ಹೋಗಿದ್ದ  ಪರಿಕ್ಕರ್ ನಂತರ ಮತ್ತೆ ಗೋವಾದ ಸಿಎಂ ಆಗಿ ವಾಪಸ್ ಆಗಿದ್ದರು. ಅನಾರೋಗ್ಯಕ್ಕೆ ತುತ್ತಾದ ಪರಿಕ್ಕರ್ ನಿಧನರಾದ ನಂತರ  ಕ್ಷೇತ್ರ  ತೆರವಾಗಿತ್ತು.