ಜಮ್ಮು ಮತ್ತು ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್’ನಲ್ಲಿ ಪಾಕಿಸ್ತಾನ ಇಂದು ಕದನ ವಿರಾಮ ಉಲ್ಲಂಘಿಸಿದೆ. ಉರಿ ಸೆಕ್ಟರ್’ನ ಬಾಝ್ ಹಾಗೂ ನಂಬಿಯಾ ಪ್ರದೇಶದಲ್ಲಿ ಪಾಕ್ ನಡೆಸಿರುವ ದಾಳಿಗೆ ಭಾರತೀಯ ಸೇನೆಯು ಕೂಡಾ ತಕ್ಕ ಪ್ರತ್ಯುತ್ತರ ನೀಡುತ್ತಿದೆ ಎಂದು ವರದಿಯಾಗಿದೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್’ನಲ್ಲಿ ಪಾಕಿಸ್ತಾನ ಇಂದು ಕದನ ವಿರಾಮ ಉಲ್ಲಂಘಿಸಿದೆ.
ಉರಿ ಸೆಕ್ಟರ್’ನ ಬಾಝ್ ಹಾಗೂ ನಂಬಿಯಾ ಪ್ರದೇಶದಲ್ಲಿ ಪಾಕ್ ನಡೆಸಿರುವ ದಾಳಿಗೆ ಭಾರತೀಯ ಸೇನೆಯು ಕೂಡಾ ತಕ್ಕ ಪ್ರತ್ಯುತ್ತರ ನೀಡುತ್ತಿದೆ ಎಂದು ವರದಿಯಾಗಿದೆ.
ಭಾರತ ಮತ್ತು ಪಾಕ್ ನಡುವೆ ಗುಂಡಿನ ಕಾಳಗ ಮುಂದುವರೆದಿದ್ದು, ಓರ್ವ ಮಹಿಳೆ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಸ್ವಾತಂತ್ರ್ಯ ದಿನದಂದು ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿರುವ ಘಟನೆ ಇದೇ ಮೊದಲು ಎನ್ನಲಾಗಿದೆ.
