Asianet Suvarna News Asianet Suvarna News

400 ದೇಗುಲ ಪುನರುಜ್ಜೀವನಕ್ಕೆ ಪಾಕಿಸ್ತಾನ ಸರ್ಕಾರದ ನಿರ್ಧಾರ

ಅಲ್ಪಸಂಖ್ಯಾತ ಹಿಂದೂಗಳ ಬಹುದಿನದ ಬೇಡಿಕೆ| 400 ದೇಗುಲ ಪುನರುಜ್ಜೀವನಕ್ಕೆ ಪಾಕಿಸ್ತಾನ ಸರ್ಕಾರದ ಸರ್ಕಾರ

Pakistan to restore hand over 400 Hindu temples
Author
Bangalore, First Published Apr 11, 2019, 10:25 AM IST

ಇಸ್ಲಾಮಾಬಾದ್‌[ಏ.11]: ಅಲ್ಪಸಂಖ್ಯಾತ ಹಿಂದೂಗಳ ಬಹುದಿನದ ಬೇಡಿಕೆಯಾಗಿದ್ದ ಪಾಕ್‌ನ 400 ಹಿಂದೂ ದೇವಾಲಯಗಳನ್ನು ಪುನಃ ತೆರೆದು ಪೂಜೆಗೆ ಅವಕಾಶ ಮಾಡಿಕೊಡಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ. ಭಾರತ-ಪಾಕ್‌ ಬೇರ್ಪಟ್ಟಾಗ ಬಹುತೇಕ ಹಿಂದುಗಳು ಪಾಕ್‌ ತೊರೆದಿದ್ದರು. ಈ ವೇಳೆ ಪಾಕ್‌ನಲ್ಲಿದ್ದ ಬಹುತೇಕ ದೇವಾಲಯಗಳು ಅತಿಕ್ರಮಣ ತೆರವಿನ ವೇಳೆ ಮುಚ್ಚಿಹೋಗಿದ್ದರೆ, ಮತ್ತೆ ಕೆಲವು ದೇವಸ್ಥಾನಗಳ ಜಾಗ ಖಾಸಗಿವರ ಪಾಲಾಗಿತ್ತು. ಜತೆಗೆ ಕೆಲ ದೇವಸ್ಥಾನಗಳು ಮದರಸಾ ಆಗಿ ಪರಿವರ್ತನೆ ಆಗಿದ್ದವು.

ಇದೀಗ ಪಾಕ್‌ ಸರ್ಕಾರ ಇಂಥ ದೇವಸ್ಥಾನಗಳನ್ನು ಪುನಃ ತೆರೆಯಲು ಮತ್ತು ಪೂಜೆಗೆ ಅವಕಾಶ ಮಾಡಿಕೊಟ್ಟು, ಅವುಗಳನ್ನು ಹಿಂದೂ ಸಮುದಾಯಕ್ಕೆ ಹಸ್ತಾಂತರಿಸಲು ಮುಂದಾಗಿದೆ. ಈ ಪ್ರಕ್ರಿಯೆ ಐತಿಹಾಸಿಕವಾದ ಸಿಯಾಲ್‌ಕೋಟ್‌ ಮತ್ತು ಪೇಶಾವರ ದೇವಸ್ಥಾನಗಳ ಹಸ್ತಾಂತರ ಮೂಲಕ ಆರಂಭಗೊಂಡಿದ್ದು, ಸಿಯಾಲ್‌ಕೋಟ್‌ನ ಜಗನ್ನಾಥ ದೇವಾಲಯ ಹಾಗೂ 1000 ವರ್ಷಗಳಷ್ಟುಹಳೆಯ ತೇಜ್‌ಸಿಂಗ್‌ ಶಿವಾಲಯ ಪುನರುಜ್ಜೀವನಗೊಳ್ಳುತ್ತಿದೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

Follow Us:
Download App:
  • android
  • ios