ಪಾಕ್ ಚಹಾ ವ್ಯಾಪಾರಿಗೆ ಅಭಿನಂದನ್ ಪೋಸ್ಟರ್ ಬಾಯ್!| ಅಭಿ ಚಹಾ ಕುಡಿವ ಫೋಟೋ ಹಾಕಿಕೊಂಡು ಭರ್ಜರಿ ವ್ಯಾಪಾರ| ದುಷ್ಮನ್‌ಗಳನ್ನೂ ದೋಸ್ತ್ ಮಾಡುತ್ತೆ ಚಹಾ!
ಕರಾಚಿ[ಮಾ.14]: ಪಾಕಿಸ್ತಾನದ ವಶದಿಂದ ಬಿಡುಗಡೆಗೊಂಡ ಭಾರತದ ವಾಯುಪಡೆ ಪೈಲಟ್ ಅಭಿನಂದನ್ ವರ್ತಮಾನ್ ಅವರ ಭಾವಚಿತ್ರವನ್ನು ಭಾರತದ ರಾಜಕೀಯ ಪಕ್ಷಗಳು ಚುನಾವಣಾ ಉದ್ದೇಶಕ್ಕೆ ಬಳಸಿಕೊಂಡು ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿವೆ. ಆದರೆ ಅಭಿನಂದನ್ ಅವರು ಚಹಾ ಕುಡಿಯುವ ದೃಶ್ಯವು ಪಾಕಿಸ್ತಾನದ ಚಹಾ ಮಾರಾಟಗಾರರಿಗೆ ವರದಾನವಾಗಿ ಪರಿಣಮಿಸಿದೆ.
ಅಭಿ ಸಮವಸ್ತ್ರ ಪಾಕ್ ಮ್ಯೂಸಿಯಂನಲ್ಲಿ?
ಅಭಿನಂದನ್ ಅವರು ಪಾಕಿಸ್ತಾನದ ವಶದಲ್ಲಿದ್ದಾಗ ಚಹಾ ಸೇವಿಸಿ ಆ ಬಗ್ಗೆ ವಿವರಣೆ ನಿಡುವ ದೃಶ್ಯವೊಂದನ್ನು ಪಾಕ್ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿತ್ತು. ನಂತರ ಭಾರತವು ಈ ದೃಶ್ಯಗಳನ್ನು ತೆಗೆದುಹಾಕುವಂತೆ ಯೂಟ್ಯೂಬ್‌ಗೆ ಕೇಳಿಕೊಂಡಿತ್ತು.
ಸೋಶಿಯಲ್ ಮೀಡಿಯಾದಲ್ಲಿ ಪೈಲಟ್ ಅಭಿ ಫಾಲೋ ಮಾಡ್ತೀದ್ದೀರಾ? IAF ಕೊಟ್ಟ ಸ್ಪಷ್ಟನೆ ಇದು!
ಈ ನಡುವೆ, ಅಭಿನಂದನ್ ಚಹಾ ಸೇವಿಸುವ ದೃಶ್ಯದ ಫೋಟೋವೊಂದನ್ನು ತನ್ನ ಚಹಾ ಅಂಗಡಿ ಮೇಲೆ ಹಾಕಿಕೊಂಡಿರುವ ಕರಾಚಿ ಚಹಾ ವ್ಯಾಪಾರಿಯೊಬ್ಬ, ‘ಐಸೀ ಚಾಯ್ ಕಿ ದುಷ್ಮನ್ ಕೋ ಭಿ ದೋಸ್ತ್ ಬನಾಯೇ’ (ಇಂದು ಎಂಥಾ ಚಹಾ ಎಂದರೆ ವೈರಿಗಳನ್ನೂ ಸ್ನೇಹಿತರನ್ನಾಗಿ ಮಾಡುತ್ತದೆ) ಎಂದು ಉರ್ದುದಲ್ಲಿ ಬರೆದುಕೊಂಡು ಭರ್ಜರಿ ವ್ಯಾಪಾರ ಮಾಡಿಕೊಳ್ಳುತ್ತಿದ್ದಾನೆ.
ಈತನ ಅಂಗಡಿಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
