ಅಭಿನಂದನ್ ಸಮವಸ್ತ್ರವನ್ನು ಪಾಕಿಸ್ತಾನ ಮ್ಯೂಸಿಯಂನಲ್ಲಿ ‘ವಾರ್ ಟ್ರೋಫಿ’ ಎಂದು ಇಡಲಾಗಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣ ಗಳಲ್ಲಿ ಹರಿದಾಡುತ್ತಿದೆ. ಈ ಸುದ್ದಿ ನಿಜಾನಾ? ಇಲ್ಲಿದೆ ಸುದ್ದಿಯಾಚೆಗಿನ ಸತ್ಯ

ಇಸ್ಲಮಾಬಾದ್[ಮಾ.11]: ಐಎಎಫ್ ವಿಂಗ್ ಕಮಾಂಡರ್ ಅಭಿನಂದನ್ ಸಮವಸ್ತ್ರವನ್ನು ಪಾಕಿಸ್ತಾನ ಮ್ಯೂಸಿಯಂನಲ್ಲಿ ‘ವಾರ್ ಟ್ರೋಫಿ’ ಎಂದು ಇಡಲಾಗಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣ ಗಳಲ್ಲಿ ಹರಿದಾಡುತ್ತಿದೆ. ಮಿಲಿಟರಿ ಸಮವಸ್ತ್ರದ ಫೋಟೋ ಹಾಕಿ ಹೀಗೆ ಹೇಳಲಾಗುತ್ತಿದೆ. ಆದರೆ ನಿಜಕ್ಕೂ ಇದು ವಿಂಗ್ ಕಮಾಂಡರ್ ಅಭಿನಂದನ್ ಸಮವಸ್ತ್ರವೇ ಎಂದು ಕ್ವಿಂಟ್ ಸುದ್ದಿ ಸಂಸ್ಥೆ ಹುಡುಕ ಹೊರಟಾಗ ಸತ್ಯ ಬಯಲಾಗಿದೆ. ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದ ವೇಳೆ ಇದು ಅಭಿನಂದನ್ ಸಮವಸ್ತ್ರ ಅಲ್ಲವೆಂದು ತಿಳಿದುಬಂದಿದೆ.

Scroll to load tweet…

Scroll to load tweet…

ಈ ವೇಳೆ ಎರಡು ಟ್ವೀಟ್‌ಗಳು ಪತ್ತೆಯಾಗಿದ್ದು, ಅವು ಅಭಿನಂದನ್ ಅವರನ್ನು ಪಾಕ್ ಸೆರೆ ಹಿಡಿಯುವುದಕ್ಕೂ ಮೊದಲು ಮಾಡಿದ ಟ್ವೀಟ್ ಗಳಾಗಿವೆ. ಅಲ್ಲಿ ಈ ಸಮವಸ್ತ್ರವು ಇಸ್ರೇಲಿ ಪೈಲಟ್ ಕ್ಯಾಪ್ಟನ್ ಲುಟ್ಜ್ ಅವರಿಗೆ ಸಂಬಂಧಿಸಿದೆ ಎಂದು ತಿಳಿದು ಬಂದಿದೆ.

Scroll to load tweet…
Scroll to load tweet…

ಅದರಂತೆ 1974 ಏಪಿಲ್ಲ್‌ನಲ್ಲಿ ಇಸ್ರೇಲ್ ಪೈಟಲ್‌ನ ಯುದ್ಧವಿಮಾನವನ್ನು ಪಾಕಿಸ್ತಾನಿ ಪೈಟಲ್ ಕೆಡವಿದ್ದರು. ಆಗ ಇಸ್ರೇಲ್ ಪೈಲಟ್ ಕ್ಯಾಪ್ಟನ್ ಧರಿಸಿದ್ದ ಸಮವಸ್ತ್ರವನ್ನು ಪಾಕ್ ಮ್ಯೂಸಿಯಂನಲ್ಲಿ ಇಡಲಾಗಿದೆ ಎಂದು ತಿಳಿದುಬಂದಿದೆ.