ನವದೆಹಲಿ[ಮಾ.07]: ಪಾಕ್‌ನಿಂದ ಇತ್ತೀಚಿಗೆ ಬಿಡುಗಡೆಗೊಂಡ ಐಎಎಫ್‌ನ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ತಮಾನ್‌ ಭಾರತಕ್ಕೆ ಮರಳಿದ್ದಾರೆ. ಆದರೆ ಬಿಡುಗಡೆಗೊಂಡು ತಯ್ನಾಡಿಗೆ ಬರುತ್ತಿದ್ದಂತೆಯೇ ಸಾಮಾಝಿಕ ಜಾಲತಾಣಗಳಲ್ಲಿ ಇವರ ಹೆಸರಿನಲ್ಲಿ ಹಲವಾರು ಖಾತೆಗಳು ಹುಟ್ಟಿಕೊಳ್ಳಲಾರಂಭಿಸಿವೆ. ಇನ್ನು ವಿಶ್ವದಾದ್ಯಂತ ಸದ್ದು ಮಾಡಿದ್ದ ಈ ವೀರ ಯೋಧನ ಹೆಸರಿನ ಖಾತೆ ಕಾಣುತ್ತಿದ್ದಂತೆಯೇ ಹಲವಾರು ಮಂದಿ ಫಾಲೋ ಮಾಡಲಾರಂಭಿಸಿದ್ದಾರೆ.

ಆದರೀಗ ಭಾರತೀಯ ವಾಯುಪಡೆಯು ವಿಂಗ್ ಕಮಾಂಡರ್ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ.

ಅಭಿನಂದನ್‌ ಹೆಸರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಲವು ಖಾತೆಗಳು ನಿರ್ವಹಿಸಲ್ಪಡುತ್ತಿರುವ ಹಿನ್ನೆಲೆಯಲ್ಲಿ ವಾಯುಪಡೆ ಈ ಸ್ಪಷ್ಟನೆ ನೀಡಿದೆ. ಟ್ವೀಟರ್‌ನಲ್ಲಿ ಈ ಕುರಿತು ಮಾಹಿತಿ ನೀಡಿರುವ ವಾಯುಪಡೆ, ಅಭಿನಂದನ್‌ ಫೇಸ್‌ಬುಕ್‌, ವಾಟ್ಸಾಫ್‌, ಟ್ವಿಟ್ಟರ್‌ನಂತಹ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಖಾತೆಗಳಿಲ್ಲ ಎಂದು ತಿಳಿಸಿದೆ.