Asianet Suvarna News Asianet Suvarna News

ಭಾರತಕ್ಕೆ ವಿಶಿಷ್ಟ ಗಿಫ್ಟ್ ಕೊಟ್ಟು ಈದ್ ಮುಬಾರಕ್ ಎಂದ ಪಾಕ್!

ಈದ್ ಪ್ರಯುಕ್ತ ಭಾರತಕ್ಕೆ ಉಡುಗೊರೆ ನೀಡಿದ ಪಾಕಿಸ್ತಾನ| ಭಾರತದ ನಾಗರಿಕ ವಿಮಾನಗಳ ಸಂಚಾರಕ್ಕೆ ತನ್ನ ವಾಯು ಪ್ರದೇಶ ಮುಕ್ತಗೊಳಿಸಿದ ಪಾಕ್| ಭಾರತಕ್ಕೆ ಈದ್ ಮುಬಾರಕ್ ಸಂದೇಶ ರವಾನಿಸಿದ ಪಾಕಿಸ್ತಾನ| ದುಬೈ-ನವದೆಹಲಿ ನಡಿವಿನ ಇಂಡಿಗೋ ವಿಮಾನ ಪಾಕಿಸ್ತಾನದ ವಾಯು ಮಾರ್ಗವಾಗಿ ಭಾರತಕ್ಕೆ| ಈದ್ ಮುಬಾರಕ್ ಎಂದ ಪಾಕಿಸ್ತಾನದ ನಾಗರಿಕ ವಿಮಾನಯಾನ ನಿರ್ದೇಶಕರು|

Pakistan Sends Eid Mubark To India By Open Up Its Air Space For Indian Civil Flights
Author
Bengaluru, First Published Jun 5, 2019, 1:40 PM IST

ಇಸ್ಲಾಮಾಬಾದ್(ಜೂ.05): ಈದ್ ಹಬ್ಬದಂದು ಶತ್ರು ಕೂಡ ಮಿತ್ರನಾಗುತ್ತಾನೆ ಎಂಬ ಮಾತಿದೆ. ಅದರಂತೆ ಭಾರತದ ವಿರುದ್ಧ ಸದಾ ಹಗೆತನ ಸಾಧಿಸುವ ಪಾಕಿಸ್ತಾನ, ಭಾರತಕ್ಕೆ ವಿಶಿಷ್ಟ ಉಡುಗೊರೆಯೊಂದನ್ನು ನೀಡಿದೆ.

ಭಾರತದ ನಾಗರಿಕ ವಿಮಾನಗಳ ಸಂಚಾರಕ್ಕೆ ತನ್ನ ವಾಯು ಪ್ರದೇಶ ಮುಕ್ತಗೊಳಿಸಿರುವ ಪಾಕಿಸ್ತಾನ, ಭಾರತಕ್ಕೆ ಈದ್ ಮುಬಾರಕ್ ಸಂದೇಶವನ್ನು ಕಳುಹಿಸಿದೆ.

ದುಬೈ-ನವದೆಹಲಿ ನಡಿವಿನ ಇಂಡಿಗೋ ವಿಮಾನ ಪಾಕಿಸ್ತಾನದ ವಾಯು ಮಾರ್ಗವಾಗಿ ಭಾರತಕ್ಕೆ ಆಗಮಿಸಿದ್ದು, ಇದಕ್ಕಾಗಿ ಪಾಕಿಸ್ತಾನ ಸಹೋದರತ್ವದ ಸಂದೇಶ ರವಾನಿಸಿದೆ.

ಪಾಕಿಸ್ತಾನದ ನಾಗರಿಕ ವಿಮಾನ ಯಾನ ನಿರ್ದೇಶನಾಲಯದ (ಸಿಎಎ) ನಿರ್ದೇಶಕರು ಇಂಡಿಗೋ ಅಧಿಕಾರಿಗಳಿಗೆ ಕರೆ ಮಾಡಿ ಈದ್ ಮುಬಾರಕ್ ತಿಳಿಸಿದ್ದಾರೆ

ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆ ಬಾಲಾಕೋಟ್ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದ ಬಳಿಕ ಉಭಯ ದೇಶಗಳು ತಮ್ಮ ವಾಯು ಪ್ರದೇಶವನ್ನು ಮುಚ್ಚಿದ್ದವು. 

ಕಳೆದ ಶನಿವಾರ ಭಾರತ ತನ್ನ ವಾಯು ಪ್ರದೇಶವನ್ನು ಪಾಕಿಸ್ತಾನದ ನಾಗರಿಕ ವಿಮಾನಗಳಿಗೆ ಮುಕ್ತಗೊಳಿಸಿದ್ದು, ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಕೂಡ ತನ್ನ ವಾಯು ಪ್ರದೇಶವನ್ನು ಭಾರತದ ನಾಗರಿಕ ವಿಮಾನಗಳಿಗೆ ಮುಕ್ತಗೊಳಿಸಿದೆ.

Follow Us:
Download App:
  • android
  • ios