ಪಾಕಿಸ್ತಾನ ಸ್ನೇಹ ಭಾಷೆ ಅರಿತುಕೊಳ್ಳುವುದು ಯಾವಾಗ? ಭಾರತದ ರಾಯಭಾರಿ ಕರೆದ ಇಫ್ತಾರ್ ಕೂಟದ ಅತಿಥಿಗಳನ್ನು ತಡೆದ ಪಾಕ್| ಇಸ್ಲಾಮಾಬಾದ್‌ನಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದ ಅಜಯ್ ಬಿಸಾರಿಯಾ| ಹೊಟೇಲ್ ಸೆರೆನಾ ಸುತ್ತುವರೆದು ಅತಿಥಿಗಳನ್ನು ತಡೆದ ಪಾಕ್ ಅಧಿಕಾರಿಗಳು| ಭಾರತದ ರಾಯಭಾರಿ ಕರೆದಿದ್ದ ಇಫ್ತಾರ್ ಕೂಟಕ್ಕೆ ಪಾಕ್ ಭಂಗ| ಪಾಕ್‌ನಿಂದ ರಾಯಭಾರಿ ಹಕ್ಕಿನ ಉಲ್ಲಂಘನೆ ಎಂದ ಅಜಯ್ ಬಿಸಾರಿಯಾ|
ಇಸ್ಲಾಮಾಬಾದ್(ಜೂ.02): ಪಾಕಿಸ್ತಾನಕ್ಕೆ ಭಾರತದ ರಾಯಭಾರಿ ಅಜಯ್ ಬಿಸಾರಿಯಾ ಕರೆದಿದ್ದ ಇಫ್ತಾರ್ ಕೂಟಕ್ಕೆ ಭಂಗ ಉಂಟು ಮಾಡಿರುವ ಪಾಕಿಸ್ತಾನ, ಇಫ್ತಾರ್ ಕೂಟದ ಅತಿಥಿಗಳನ್ನು ತಡೆದು ಉದ್ಘಟತನ ಮೆರೆದಿದೆ.
ಇಸ್ಲಾಮಾಬಾದ್‌ನಲ್ಲಿರುವ ಹೋಟೆಲ್ ಸೆರೆನಾದಲ್ಲಿ ಭಾರತದ ರಾಯಭಾರಿ ಅಜಯ್ ಬಿಸಾರಿಯಾ ಇಫ್ತಾರ್ ಕೂಟವನ್ನು ಆಯೋಜಿಸಿದ್ದರು. ಆದರೆ ಸೆರೆನಾ ಹೋಟೆಲ್‌ನ್ನು ಸುತ್ತುವರೆದ ಪಾಕ್ ಅಧಿಕಾರಿಗಳು, ಇಫ್ತಾರ್ ಕೂಟಕ್ಕೆ ಬಂದ ಅತಥಿಗಳನ್ನು ವಾಪಸ್ ಕಳುಹಿಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಜಯ್ ಬಿಸಾರಿಯಾ, ಪಾಕ್‌ನ ಈ ನಡೆ ರಾಯಭಾರಿ ಹಕ್ಕಿನ ಉಲ್ಲಂಘನೆಯಾಗಿದ್ದು, ಇಂತಹ ನಡುವಳಿಕೆ ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಧಕ್ಕೆ ತರುತ್ತದೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.
