ನವದೆಹಲಿ(ಜೂ.05): ದೇಶಾದ್ಯಂತ ರಂಜಾನ್ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಈದ್ ಪ್ರಯುಕ್ತ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ.

ರಂಜಾನ್ ಹಬ್ಬದ ಪ್ರಯುಕ್ತ ಭಾರತ-ಪಾಕ್ ಮತ್ತು ಭಾರತ-ಬಾಂಗ್ಲಾ ಗಡಿಯಲ್ಲಿ ಉಭಯ ದೇಶಗಳ ಸೈನಿಕರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.

ಭಾರತ-ಪಾಕ್ ನಡುವಿನ ಅಟ್ಟಾರಿ ಗಡಿಯಲ್ಲಿ ಈದ್-ಉಲ್-ಫಿತರ್ ಅಂಗವಾಗಿ ಉಭಯ ದೇಶಗಳ ಗಡಿ ರಕ್ಷಣಾ ಪಡೆಗಳು ಸಹಿ ಹಂಚಿ ಸಂಭ್ರಮಿಸಿದವು.

ಅದರಂತೆ ಭಾರತ-ಬಾಂಗ್ಲಾ ನಡುವಿನ ಸಿಲಿಗುರಿ ಬಳಿಯ ಫುಲ್‌ಭರಿ ಗಡಿಯಲ್ಲಿ ಭಾರತ-ಬಾಂಗ್ಲಾ ಸೈನಿಕರು ಪರಸ್ಪರ ಸಿಹಿ ಹಂಚಿ ರಂಜಾನ್ ಹಬ್ಬವನ್ನು ಸಮಭ್ರಮಿಸಿದರು.