ಮತ್ತೆ ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ತಗಾದೆ ತೆಗೆದ ಪಾಕಿಸ್ತಾನ

news | Saturday, January 27th, 2018
Suvarna Web Desk
Highlights

ಗೌರವಾನ್ವಿತ ಸಂಸ್ಥೆಯು ಅದರ ಜವಾಬ್ದಾರಿಗಳಿಗೆ ತಕ್ಕಂತೆ ಕಾರ್ಯನಿರ್ವಹಿಸಬೇಕು. ಪ್ಯಾಲೆಸ್ಟೈನ್ ಮತ್ತು ಕಾಶ್ಮೀರ ಮುಂತಾದ ಸುದೀರ್ಘವಾದ ವಿವಾದಗಳನ್ನು ತನ್ನದೇ ನಿರ್ಣಯಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ಖಚಿತಪಡಿಸಬೇಕು.

ವಿಶ್ವಸಂಸ್ಥೆ(ಜ.27): ಪಾಕಿಸ್ತಾನವು ಮತ್ತೆ ಕಾಶ್ಮೀರ ವಿಷಯದ ಬಗ್ಗೆ ವಿಶ್ವಸಂಸ್ಥೆಯಲ್ಲಿ ತಗಾದೆ ತೆಗೆದಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮಧ್ಯಪ್ರಾಚ್ಯದ ಪ್ರಸ್ತುತ ಅಶಾಂತಿಯ ವಿಷಯದ ಬಗ್ಗೆ ನಡೆದ ಚರ್ಚೆಯಲ್ಲಿ ಪಾಕಿಸ್ತಾನದ ಶಾಶ್ವತ ಪ್ರತಿನಿಧಿ ಮಲೀಹಾ ಸೋಧಿ ಈ ಬಗ್ಗೆ ಪ್ರಸ್ತಾಪಿಸಿ' ಪಾಕಿಸ್ತಾನವು ಪ್ಯಾಲೆಸ್ಟೀನಿಯರ  ಕಾನೂನುಬದ್ಧ ಹಕ್ಕುಗಳನ್ನು ಬೆಂಬಲಿಸುತ್ತದೆ, ವಾಸ್ತವವಾಗಿ, ಉದಾಹರಣೆಗೆ ಪ್ರಚಲಿತವಿರುವ ವಿದೇಶಿ ಆಕ್ರಮಣದಲ್ಲಿ ವಾಸಿಸುವ ಕಾಶ್ಮೀರಿ ಜನರ ವಿಷಯದಂತೆ' ಬೆಂಬಲಿಸುತ್ತದೆ

ಅಲ್ಲದೆ, ಈ ಗೌರವಾನ್ವಿತ ಸಂಸ್ಥೆಯು ಅದರ ಜವಾಬ್ದಾರಿಗಳಿಗೆ ತಕ್ಕಂತೆ ಕಾರ್ಯನಿರ್ವಹಿಸಬೇಕು. ಪ್ಯಾಲೆಸ್ಟೈನ್ ಮತ್ತು ಕಾಶ್ಮೀರ ಮುಂತಾದ ಸುದೀರ್ಘವಾದ ವಿವಾದಗಳನ್ನು ತನ್ನದೇ ನಿರ್ಣಯಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ಖಚಿತಪಡಿಸಬೇಕು. ಇದರಿಂದಾಗಿ ವಿಶ್ವದ ಜನರು ವಿಶ್ವಸಂಸ್ಥೆಯಲ್ಲಿರುವ ತನ್ನ ಸಂಪೂರ್ಣ ನಂಬಿಕೆಯನ್ನು ಕಳೆದುಕೊಳ್ಳುವುದಿಲ್ಲ" ಎಂದು ವಿವಾದವನ್ನು ಮತ್ತೊಮ್ಮೆ ಪ್ರಸ್ತಾಪಿಸಿದರು.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟರ್ರೆಸ್ ಕೆಲವು ದಿನಗಳ ಹಿಂದಷ್ಟೆ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನದ ನಡುವೆ ವಿಶ್ವಸಂಸ್ಥೆ ಮಧ್ಯಸ್ಥಿಕೆ ವಹಿಸುವುದಿಲ್ಲ'. ಅಲ್ಲದೆ ಇವೆರಡೂ ದೇಶಗಳು ಮಧ್ಯಸ್ಥಿಕೆಯ ಮೂಲಕ ಸಮಸ್ಯೆ ಬಗೆಹರಿಸುವುದನ್ನು ಬೆಂಬಲಿಸುತ್ತದೆ ಎಂಬ ಹೇಳಿಕೆಯ ಹಿನ್ನಲೆಯಲ್ಲಿ ಪಾಕ್ ಹೇಳಿಕೆ ತಿರುವು ಪಡೆದುಕೊಂಡಿದೆ.

ಭಾರತ ಕೂಡ ವಿವಾದದ ಬಗ್ಗೆ ಸ್ಪಷ್ಟಪಡಿಸಿ, ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನವು ಬೇರೆಯವರ ಮಧ್ಯಸ್ಥಿಕೆಗೆ ನಿರಂತರವಾಗಿ ಪ್ರಯತ್ನಿಸುತ್ತಿದ್ದು, ಇದನ್ನು ಭಾರತ ವಿರೋಧಿಸಿತ್ತದೆ' ಎಂದು ತಿಳಿಸಿದೆ.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk