ಕ್ಯಾ.ಸಿಂಗ್ ಎಚ್ಚರಿಕೆ ನಿಜವಾಯ್ತಾ?: ಕರ್ತಾರ್‌ಪುರ್ ಹೆಸರಲ್ಲಿ ಪಾಕ್ ಮೋಸ?
ಕರ್ತಾರ್‌ಪುರ್ ಕಾರಿಡಾರ್ ಹೆಸರಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು| ನಿಜವಾಗುತ್ತಾ ಪಂಜಾಬ್ ಸಿಎಂ ಕ್ಯಾ.ಅಮರೀಂದರ್ ಸಿಂಗ್ ಅನುಮಾನ?| ಕರ್ತಾರ್‌ಪುರ್ ಕಾರಿಡಾರ್‌ನ್ನು ಭಾರತೀಯ ಸಿಖ್ ಯಾತ್ರಾರ್ಥಿಗಳಿಗೆ ಮುಕ್ತ| ಯಾತ್ರಾರ್ಥಿಗಳಿಗೆ ಸ್ವಾಗತ ಕೋರುವ ವಿಡಿಯೋ ಬಿಡುಗೆ ಮಾಡಿದ ಪಾಕಿಸ್ತಾನ| ವಿಡಿಯೋದಲ್ಲಿ ಖಲಿಸ್ತಾನ್ ಪ್ರತ್ಯೇಕತಾವಾದಿ ನಾಯಕರ ಭಾವಚಿತ್ರ ಹಾಕಿದ ಪಾಕಿಸ್ತಾನ| ಪಾಕಿಸ್ತಾನದಿಂದ ಸಿಖ್ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಹುನ್ನಾರ| ಕ್ಯಾ.ಅಮರೀಂದರ್ ಸಿಂಗ್ ಹೇಳಿಕೆಗೆ ಪೂರಕವಾಗಿವೆ ಗುಪ್ತಚರ ವರದಿಗಳು|
ನವದೆಹಲಿ(ನ.06): ಕರ್ತಾರ್‌ಪುರ್ ಕಾರಿಡಾರ್ ಹೆಸರಲ್ಲಿ ಪಾಕಿಸ್ತಾನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದು, ಭಾರತ ಸರ್ಕಾರ ಈ ಕುರಿತು ಎಚ್ಚರಿದಿಂದ ಇರುವುದು ಒಳ್ಳೆಯದು ಎಂಬ ಪಂಜಾಬ್ ಸಿಎಂ ಕ್ಯಾ.ಅಮರೀಂದರ್ ಸಿಂಗ್ ಹೇಳಿಕೆ ನಿಜವಾಗುವ ಲಕ್ಷಣ ಕಾಣುತ್ತಿದೆ.
ಕರ್ತಾರ್‌ಪುರ್ ಗುರುದ್ವಾರಕ್ಕೆ ವೀಸಾ ರಹಿತ ಪ್ರವೇಶಕ್ಕೆ ಪಾಕ್ ಅಸ್ತು!
ಪಾಕಿಸ್ತಾನ ಕರ್ತಾರ್‌ಪುರ್ ಕಾರಿಡಾರ್‌ನ್ನು ಭಾರತೀಯ ಸಿಖ್ ಯಾತ್ರಾರ್ಥಿಗಳಿಗೆ ಮುಕ್ತವಾಗಿಸಿದ್ದು, ಯಾತ್ರಾರ್ಥಿಗಳಿಗೆ ಸ್ವಾಗತ ಕೋರುವ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.
ಈ ವಿಡಿಯೋದಲ್ಲಿ ಕರ್ತಾರ್‌ಪುರ್ ಸುತ್ತಮುತ್ತ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕರ ಭಾವಚಿತ್ರಗಳನ್ನು ಸೇರಿಸಿದೆ. ಈ ವಿಡಿಯೋ ಇದೀಗ ಭಾರೀ ವಿವಾದವನ್ನು ಹುಟ್ಟು ಹಾಕಿದೆ.
ಕರ್ತಾರ್‌ಪುರ್: ಗುರು-ಭಕ್ತರನ್ನು ಬೆಸೆಯುವ ಅಪರೂಪದ ಕಾರಿಡಾರ್!
ಪಾಕಿಸ್ತಾನದ ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವಾಲಯ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ, ಪ್ರತ್ಯೇಕತಾವಾದಿ ನಾಯಕರಾದ ಬಿಂದ್ರನ್ ವಾಲೆ, ಮೇಜರ್ ಜನರಲ್ ಶಾಬೆಗ್ ಸಿಂಗ್, ಅಮ್ರಿಕ್ ಸಿಂಗ್ ಖಾಲ್ಸ ಅವರ ಭಾವಚಿತ್ರಗಳನ್ನು ಹಾಕಲಾಗಿದೆ.
ಪಾಕಿಸ್ತಾನ ಈ ನಡೆ ಕರ್ತಾರ್‌ಪುರ್ ಕಾರಿಡಾರ್ ಹೆಸರಲ್ಲಿ ಸಿಖ್ ಭಯೋತ್ಪಾದನೆಯನ್ನು ಮತ್ತೊಮ್ಮೆ ಹುಟ್ಟಿ ಹಾಕುವ ಹುನ್ನಾರ ಅಡಗಿದೆ ಎಂಬ ಕ್ಯಾ.ಅಮರೀಂದರ್ ಸಿಂಗ್ ಅನುಮಾನಕ್ಕೆ ಬಲ ಬಂದಂತಾಗಿದೆ.
ಕರ್ತಾರ್‌ಪುರ್ ಕಾರಿಡಾರ್ ಹೆಸರಲ್ಲಿ ಪಂಜಾಬ್‌ನಲ್ಲಿ ಸಿಖ್ ಉಗ್ರರ ಉಪಟಳ ಹೆಚ್ಚಿಸಲು ಪಾಕಿಸ್ತಾನ ಹುನ್ನಾರ ನಡೆಸಿದ್ದು, ಈ ಕುರಿತು ಎಚ್ಚರದಿಂದ ಇರಬೇಕು ಎಂದು ಕ್ಯಾ.ಸಿಂಗ್ ಭಾರತ ಸರ್ಕಾರವನ್ನು ಒತ್ತಾಯಿಸಿದ್ದರು.
ಕರ್ತಾರ್‌ಪುರ್ ಕಾರಿಡಾರ್ ಯೋಜನೆಗೆ ಸಹಿ ಹಾಕಿದ ಭಾರತ-ಪಾಕಿಸ್ತಾನ!
ಅಲ್ಲದೇ ಇಂತದ್ದೇ ಅಭಿಪ್ರಾಯ ವ್ಯಕ್ತಪಡಿಸಿರುವ ಭಾರತದ ಗುಪ್ತಚರ ಸಂಸ್ಥೆಗಳು, ಪಾಕಿಸ್ತಾನ ಕರ್ತಾರ್‌ಪುರ್ ಕಾರಿಡಾರ್ ಹೆಸರಲ್ಲಿ ಖಲಿಸ್ತಾನ್ ಚಳವಳಿಗೆ ಮರುಹುಟ್ಟು ನೀಡುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದೆ.