ಕರ್ತಾರ್‌ಪುರ್ ಕಾರಿಡಾರ್ ಯೋಜನೆಗೆ ಸಹಿ ಹಾಕಿದ ಭಾರತ-ಪಾಕಿಸ್ತಾನ!
ಕರ್ತಾರ್‌ಪುರ್ ಕಾರಿಡಾರ್ ಯೋಜನೆಗೆ ಸಹಿ ಹಾಕಿದ ಭಾರತ-ಪಾಕಿಸ್ತಾನ| ಕಾರಿಡಾರ್ ಕಾರ್ಯಾಚರಣೆಯ ವಿಧಾನಗಳ ಕುರಿತ ಒಪ್ಪಂದಕ್ಕೆ ಸಹಿ| ಕಾರಿಡಾರ್ ಔಪಚಾರಿಕ ರೂಪುರೇಷೆಗಳಿಗೆ ಅಧಿಕೃತ ಚಾಲನೆ| ಭಾರತ ತನ್ನ ಯಾತ್ರಿಕರ ಪಟ್ಟಿಯನ್ನು ಹತ್ತು ದಿನ ಮೊದಲು ಪಾಕಿಸ್ತಾನಕ್ಕೆ ಕಳುಹಿಸಬೇಕು| ನಾಲ್ಕು ದಿನಗಳ ಹಿಂದೆ ಯಾತ್ರಿಕರ ಕುರಿತು ದೃಢೀಕರಿಸಿದ ಮಾಹಿತಿ ನೀಡಬೇಕು|ಪಾಕಿಸ್ತಾನದಿಂದ ಗುರು ನಾನಕ್ ದರ್ಶನ ಹಾಗೂ ಪ್ರಸಾದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆ|
ಗುರುದಾಸ್‌ಪುರ್(ಅ.24): ಭಾರತ-ಪಾಕಿಸ್ತಾನ ನಡುವಿನ ಮಹತ್ವದ ಕರ್ತಾರ್‌ಪುರ್ ಕಾರಿಡಾರ್ ಯೋಜನೆಗೆ ಉಭಯ ರಾಷ್ಟ್ರಗಳು ಸಹಿ ಹಾಕಿವೆ.
ಕರ್ತಾರ್‌ಪುರ ಉದ್ಘಾಟನೆಗೆ ಸಿಂಗ್‌ಗೆ ಇಮ್ರಾನ್ ಅಧಿಕೃತ ಆಹ್ವಾನ!
ಕಾರಿಡಾರ್ ಕಾರ್ಯಾಚರಣೆಯ ವಿಧಾನಗಳ ಕುರಿತ ಒಪ್ಪಂದಕ್ಕೆ ಭಾರತ ಹಾಗೂ ಪಾಕಿಸ್ತಾನ ಇಂದು ಸಹಿ ಹಾಕಿದ್ದು, ಔಪಚಾರಿಕ ರೂಪುರೇಷೆಗಳಿಗೆ ಅಧಿಕೃತ ಚಾಲನೆ ದೊರೆತಿದೆ.
ಗುರು-ಭಕ್ತರನ್ನು 70 ವರ್ಷ ದೂರ ಮಾಡಿದ್ದ ಕಾಂಗ್ರೆಸ್: ಮೋದಿ ಆರೋಪ!
ಈ ಯಾತ್ರೆ ವೀಸಾ ಮುಕ್ತವಾಗಿರಲಿದ್ದು, ಯಾತ್ರಿಕರು ಸೂಕ್ತ ಪಾಸ್‌ಪೋರ್ಟ್ ಮಾತ್ರ ಕೊಂಡೊಯ್ಯಬೇಕು. ಭಾರತೀಯ ಮೂಲದ ಯಾತ್ರಿಕರು ಪಾಸ್ ಪೋರ್ಟ್ ನೊಂದಿಗೆ ಒಇಸಿ ಅನ್ನು ಕೂಡ ಕೊಂಡೊಯ್ಯಬೇಕಾಗುತ್ತದೆ.
ಒಪ್ಪಂದದ ಅನುಸಾರ ಭಾರತ ತನ್ನ ಯಾತ್ರಿಕರ ಪಟ್ಟಿಯನ್ನು ಯಾತ್ರೆಯ ಹತ್ತು ದಿನ ಮುಂಚಿತವಾಗಿ ಪಾಕಿಸ್ತಾನಕ್ಕೆ ಕಳುಹಿಸುತ್ತದೆ ಮತ್ತು ನಾಲ್ಕು ದಿನಗಳ ಹಿಂದೆ ಯಾತ್ರಿಕರ ಕುರಿತು ದೃಢೀಕರಿಸಿದ ಮಾಹಿತಿ ನೀಡುತ್ತದೆ.
ಪಾಕಿಸ್ತಾನ ಬಾಬಾ ಗುರು ನಾನಕ್ ದರ್ಶನ ಹಾಗೂ ಪ್ರಸಾದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದೆ ಎಂದು ಗೃಹ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
2018ರ ನವೆಂಬರ್ 22ರಂದು ಸಂಪುಟ ಸಭೆಯಲ್ಲಿ ಗುರು ನಾನಕ್ ದೇವ್ ಅವರ 550ನೆ ಜನ್ಮ ಶತಮಾನೋತ್ಸವವನ್ನು ವಿಶ್ವದಾದ್ಯಂತ ವಿಜೃಂಭಣೆಯಿಂದ ಆಚರಿಸುವ ನಿರ್ಣಯ ಕೈಗೊಳ್ಳಲಾಗಿತ್ತು. ಜೊತೆಗೆ, ಭಾರತೀಯ ಯಾತ್ರಿಕರಿಗೆ ದರ್ಬಾರ್ ಸಾಹಿಬ್‌ಗೆ ಭೇಟಿ ನೀಡಲು ಅನುಕೂಲವಾಗುವಂತೆ ಕರ್ತಾರ್‌ಪುರ್ ಸಾಹಿಬ್ ಕಾರಿಡಾರ್ ನಿರ್ಮಿಸಲು ನಿರ್ಧರಿಸಲಾಗಿತ್ತು.
ಕರ್ತಾರ್‌ಪುರ್: ಗುರು-ಭಕ್ತರನ್ನು ಬೆಸೆಯುವ ಅಪರೂಪದ ಕಾರಿಡಾರ್!