Asianet Suvarna News Asianet Suvarna News

ಗಡಿಯಲ್ಲಿ ಉಗ್ರರ ಜಮಾವಣೆ ತೀವ್ರಗೊಳಿಸಿದ ಪಾಕಿಸ್ತಾನ!

ಗಡಿಯಲ್ಲಿ ಉಗ್ರರ ಜಮಾವಣೆ ತೀವ್ರಗೊಳಿಸಿದ ಪಾಕ್‌| ಕಳೆದ ಕೆಲ ದಿನಗಳಿಂದ ನಿರಂತರ ಉಗ್ರ ಜಮಾವಣೆ| ಪಾಕ್‌ನ ಯಾವುದೇ ಕೃತ್ಯಕ್ಕೆ ಸೂಕ್ತ ತಿರುಗೇಟು: ಸೇನೆ

Pakistan intensifying efforts to strengthen terrorists along LoC Says Army
Author
Bangalore, First Published Aug 7, 2019, 12:30 PM IST

ಶ್ರೀನಗರ[ಏ.07]: ಜಮ್ಮು: ಭಾರತದ ಸ್ವಾತಂತ್ರ್ಯ ನಂತರ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಾಂವಿಧಾನಿಕ 370ನೇ ವಿಧಿ ರದ್ದುಗೊಳಿಸಿ, ಜಮ್ಮು-ಕಾಶ್ಮೀರವನ್ನು ಎರಡು ಭಾಗಗಳಾಗಿ ವಿಭಜಿಸಿ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದ ಬೆನ್ನಲ್ಲೇ, ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಶತ್ರು ರಾಷ್ಟ್ರ ಪಾಕಿಸ್ತಾನ ಭಯೋತ್ಪಾದಕರ ಮೂಲಕ ವಿಧ್ವಂಸಕ ಕೃತ್ಯ ಎಸಗುವ ಬಹುದೊಡ್ಡ ಸಂಚು ರೂಪಿಸಿದ ಎಂಬ ವಿಚಾರ ಬಯಲಾಗಿದೆ.

ಮತ್ತೆ ಪುಲ್ವಾಮ ರೀತಿ ದಾಳಿ: ಭಾರತಕ್ಕೆ ಪಾಕ್ ಬೆದರಿಕೆ!

ಇದಕ್ಕಾಗಿ ಜಮ್ಮು-ಕಾಶ್ಮೀರದ ಗಡಿ ರೇಖೆ ಭಾಗಗಳಲ್ಲಿ ಪಾಕಿಸ್ತಾನ ಕಳೆದ ಕೆಲವು ದಿನಗಳಿಂದ ಭಾರೀ ಪ್ರಮಾಣದ ಭಯೋತ್ಪಾದಕರ ಜಮಾವಣೆ ಮಾಡುತ್ತಿದೆ. ಅಲ್ಲದೆ, ಕಾಶ್ಮೀರಕ್ಕೆ ಬಾಹ್ಯ ನುಸುಳುಕೋರರರನ್ನು ರವಾನಿಸುತ್ತಿದೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆಪರೇಷನ್ ಕಾಶ್ಮೀರ, ಆರ್ಟಿಕಲ್ 370 ರದ್ದು: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಬಗ್ಗೆ ಮಂಗಳವಾರ ಮಾತನಾಡಿದ ಭಾರತೀಯ ಸೇನೆಯ ಉತ್ತರ ಕಮ್ಯಾಂಡ್‌ನ ಮುಖ್ಯಸ್ಥ ಲೆಫ್ಟಿನೆಂಟ್‌ ಜನರಲ್‌ ರಣಬೀರ್‌ ಸಿಂಗ್‌, ‘ಒಂದೆಡೆ ಭಾರತಕ್ಕೆ ಉಗ್ರರನ್ನು ರವಾನಿಸುತ್ತಿರುವ ಪಾಕಿಸ್ತಾನ ಮತ್ತೊಂದೆಡೆ ಗಡಿ ಪ್ರದೇಶಗಳಲ್ಲಿ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಲು ಹೊಂಚು ಹಾಕುತ್ತಿದೆ. ಒಂದು ವೇಳೆ ಪಾಕಿಸ್ತಾನ ಇದೇ ರೀತಿ ಕದನ ವಿರಾಮ ಉಲ್ಲಂಘಿಸಿದರೆ, ಭಾರತೀಯ ಸೇನೆಯು ತಿರುಗೇಟು ನೀಡಲು ಸರ್ವಸನ್ನದ್ಧವಾಗಿದೆ’ ಎಂದರು.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ವಿಧಿ ರದ್ದುಗೊಳಿಸಿದ ಬೆನ್ನಲ್ಲೇ, ಕಣಿವೆ ರಾಜ್ಯದಲ್ಲಿ ಉಗ್ರರು ಮತ್ತು ಪಾಕಿಸ್ತಾನದಿಂದ ಎದುರಾಗಬಹುದಾದ ಯುದ್ಧೋಪಸ್ಥಿತಿ ಹಾಗೂ ಪ್ರಕ್ಷುಬ್ಧ ಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಮಂಗಳವಾರ ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಲೆಫ್ಟಿನೆಂಟ್‌ ಜನರಲ್‌ ರಣಬೀರ್‌ ಸಿಂಗ್‌ ನೇತೃತ್ವದಲ್ಲಿ ಗುಪ್ತಚರ ದಳ ಹಾಗೂ ಭದ್ರತಾ ಸಂಸ್ಥೆಗಳ ಮುಖ್ಯ ತಂಡಗಳೊಂದಿಗೆ ಮಹತ್ವದ ಚರ್ಚೆ ನಡೆಸಲಾಯಿತು.

ಕಾಶ್ಮೀರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧ: ಪಾಕ್‌ ಸೇನೆ!

ಈ ಸಂದರ್ಭದಲ್ಲಿ ಕೇಂದ್ರಾಡಳಿತ ಪ್ರದೇಶವಾಗಿ ಮಾರ್ಪಡಲಿರುವ ಜಮ್ಮು-ಕಾಶ್ಮೀರ ಹಾಗೂ ಲಡಾಖ್‌ನಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ಭದ್ರತಾ ಕ್ರಮಗಳನ್ನು ಕೈಗೊಳ್ಳುವ ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೆ, ಸಾರ್ವಜನಿಕರು ಯಾರೂ ಸಹ ಗಾಳಿಸುದ್ದಿಗೆ ಕಿವಿಗೊಡಬಾರದು ಹಾಗೂ ಯಾವುದೇ ರೀತಿಯ ಉದ್ರಿಕ್ತ ಪ್ರಚೋದನೆಗಳಿಗೆ ಒಳಗಾಗಬಾರದು ಎಂದು ಸೇನೆ ಸೂಚನೆ ನೀಡಿದೆ.

Follow Us:
Download App:
  • android
  • ios