Asianet Suvarna News Asianet Suvarna News

ಪಾಕ್'ನಲ್ಲಿ ಮರ್ಯಾದಾ ಹತ್ಯೆ : ಭಾವಿ ಪತಿಯೊಂದಿಗೆ ಮಾತನಾಡಿದ್ದಕ್ಕೆ ಗುಂಡಿಟ್ಟ ಸೋದರ ಮಾವ

ಅದೇ ತಿಂಗಳು ಸೆಪ್ಟೆಂಬರ್'ನಲ್ಲಿ ನಡೆದ  ಮತ್ತೊಂದು ಘಟನೆಯಲ್ಲಿ ಪಂಜಾಬ್ ಪ್ರಾಂತ್ಯದಲ್ಲಿ  ಪ್ರೀತಿಸಿದ ಕಾರಣಕ್ಕಾಗಿ ಸಹೋದರನೆ ಕೊಡಲಿಯಿಂದ ಹತ್ಯೆ ಮಾಡಿದ್ದ. ಪೇಶಾವರ ಪ್ರಾಂತ್ಯದಲ್ಲಿ ಸ್ನೇಹಿತರಿದ್ದರೆಂಬ ಕಾರಣಕ್ಕೆ ತನ್ನ ಬ್ಬರು ಪುತ್ರಿಯರನ್ನು ಕೊಲೆ ಮಾಡಿದ್ದ.

Pakistan honour killing Girl fiance shot dead for talking to each other before marriage

ಕರಾಚಿ(ಜ.05): ಇತ್ತೀಚಿಗೆ ಪಾಕಿಸ್ತಾನದಲ್ಲಿ ಮರ್ಯಾದಾ ಹತ್ಯೆಗಳು ಹೆಚ್ಚಾಗುತ್ತಿವೆ. ಮದುವೆಗೆ ನಿಶ್ಚಯಿಸಲಾಗಿದ್ದ ಯುವಕ, ಯುವತಿಯನ್ನು ಹುಡುಗಿಯ ಸೋದರ ಮಾವನೆ ಗುಂಡಿಟ್ಟು ಕೊಂದ ಘಟನೆ ಸಿಂಧ್ ಪ್ರಾಂತ್ಯದ ಹಳ್ಳಿಯೊಂದರಲ್ಲಿ ನಡೆದಿದೆ.

ಯುವತಿ ನಜ್ರೀನ್ ಹಾಗೂ ಯುವಕ ಶಾಹೀದ್ ಕೊಲೆಯಾದವರು. ಸಿಂಧ್ ಪ್ರಾಂತ್ಯದ ನಯಿವಾಹಿ ಹಳ್ಳಿಯವರಾದ ವರಿಗೆ ಇವರಿಬ್ಬರಿಗೂ ಮದುವೆ ನಿಶ್ಚಿಯಿಸಲಾಗಿತ್ತು.ಇಬ್ಬರು ಮನೆ ಹತ್ತಿರದ ಬಳಿ ಮಾತನಾಡುತ್ತಿದ್ದಾಗ ಎದುರಿಗೆ ಸಿಕ್ಕ ಯುವತಿಯ ಸೋದರ ಮಾವ ಮದುವೆಗೆ ಮುಂಚೆ ಮಾತನಾಡುವುದು ಏಕೆ ಎಂದು ಪ್ರಶ್ನಿಸಿ ಸ್ಥಳದಲ್ಲೇ ಇಬ್ಬರನ್ನು ಗುಂಡಿಟ್ಟು ಕೊಂದಿದ್ದಾನೆ. ಪ್ರಕರಣಕ್ಕೆ ಸಂಭದಿಸಿದಂತೆ ಸೋದರ ಮಾವನನ್ನು ಬಂಧಿಸಲಾಗಿದೆ.

ಕಳೆದ ವರ್ಷ ಪಾಕ್'ನಲ್ಲಿ  ಹಲವಾರು ಮರ್ಯಾದ ಹತ್ಯ ಪ್ರಕರಣಗಳು ನಡೆದಿವೆ. 2017ರ ಸೆಪ್ಟೆಂಬರ್'ನಲ್ಲಿ ಮನೆಯಿಂದ ಓಡಿ ಹೋಗಲು ನಿಶ್ಚಯಿಸಿದ್ದ ಇಬ್ಬರನ್ನು ವಿದ್ಯುತ್ ಸ್ಪರ್ಶದ ಮೂಲಕ ಕೊಲ್ಲಲಾಗಿತ್ತು. ಅದೇ ತಿಂಗಳು ಸೆಪ್ಟೆಂಬರ್'ನಲ್ಲಿ ನಡೆದ  ಮತ್ತೊಂದು ಘಟನೆಯಲ್ಲಿ ಪಂಜಾಬ್ ಪ್ರಾಂತ್ಯದಲ್ಲಿ  ಪ್ರೀತಿಸಿದ ಕಾರಣಕ್ಕಾಗಿ ಸಹೋದರನೆ ಕೊಡಲಿಯಿಂದ ಹತ್ಯೆ ಮಾಡಿದ್ದ. ಪೇಶಾವರ ಪ್ರಾಂತ್ಯದಲ್ಲಿ ಸ್ನೇಹಿತರಿದ್ದರೆಂಬ ಕಾರಣಕ್ಕೆ ತನ್ನ ಬ್ಬರು ಪುತ್ರಿಯರನ್ನು ಕೊಲೆ ಮಾಡಿದ್ದ.

ಪಾಕ್'ನಾದ್ಯಂತ ಈ ರೀತಿಯ ಮರ್ಯಾದ ಹತ್ಯೆ ಪ್ರಕರಣಗಳು ಹಲವು ನಡೆದಿವೆ.ಪಾಕ್'ನ ಮಾನವ ಹಕ್ಕು ಆಯೋಗ ಕಳೆದ ಒಂದು ದಶಕದಲ್ಲಿ  ವಾರ್ಷಿಕ 650 ಮರ್ಯಾದಾ ಹತ್ಯೆಗಳು ನಡೆಯುತ್ತಿದ್ದು, ಆದರೆ ಬಹುತೇಕ ಪ್ರಕರಣಗಳು ವರದಿಯಾಗುವುದಿಲ್ಲ ಎಂದು ತಿಳಿಸಿದೆ.

Follow Us:
Download App:
  • android
  • ios