ನ್ಯೂಯಾರ್ಕ್[ ಆ. 16]  ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಭಾರತದ ಕ್ರಮವನ್ನು ವಿರೋಧಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ದೂರು ಸಲ್ಲಿಸಿದ್ದ ಪಾಕಿಸ್ತಾನಕ್ಕೆ ಬಾಲ ಸುಟ್ಟ ಬೆಕ್ಕಿನ ಕತೆಯಾಗಿದೆ.

ಮೊದಲಿನಿಂದಲೂ ಪಾಕಿಸ್ತಾನಕ್ಕೆ ಬೆಂಬಲ ಸೂಚಿಸುತ್ತಾ ಬಂದಿರುವ ಚೀನಾ ಮಾತ್ರ ಭದ್ರತಾ ಮಂಡಳಿಯಲ್ಲಿ ಶುಕ್ರವಾರ ನಡೆದ ಮುಚ್ಚಿದ ಬಾಗಿಲಿನ ಸಭೆಯಲ್ಲಿ ಪಾಕ್ ಪರವಾಗಿ ನಿಂತಿತ್ತು. ಆದರೆ, ಬೇರೆ ಯಾವ ದೇಶಗಳಿಂದಲೂ ಪಾಕಿಸ್ತಾನಕ್ಕೆ ಕ್ಯಾರೇ ಎನ್ನಲಿಲ್ಲ. ಆದರೆ ಈ ಸಭೆ ಯಾವುದೇ ಅಧಿಕೃತ ನಿರ್ಣಯ ಹೊರಕ್ಕೆ ಹಾಕಲಿಲ್ಲ.

ಟಿಟ್ ಫಾರ್ ಟ್ಯಾಟ್: ಥಾರ್ ಲಿಂಕ್ ಎಕ್ಸಪ್ರೆಸ್ ರದ್ದುಗೊಳಿಸಿದ ಭಾರತ!

ಭಾರತದ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿದ ರಷ್ಯಾ, ಈ ವಿವಾದವನ್ನು ಉಭಯ ದೇಶಗಳು ದ್ವಿಪಕ್ಷೀಯ ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳಬೇಕು ಎಂದು ಹೇಳಿತು.50 ವರ್ಷಗಳಲ್ಲಿಯೇ ಇದೇ ಮೊದಲ ಬಾರಿಗೆ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಈ ರೀತ ಸಭೆ ನಡೆದಿದೆ. 1965ರಲ್ಲಿ ಈ ರೀತಿಯ ಸಭೆ ನಡೆದಿತ್ತು. ಇದು ಮುಚ್ಚಿದ ಬಾಗಿಲಿನ ಸಭೆಯಾಗಿರುವುದರಿಂದ ಇದನ್ನು ಸಂಪೂರ್ಣ ಭದ್ರತಾ ಸಭೆ ಎಂದು ಪರಿಗಣಿಸಲು ಸಾಧ್ಯವಿಲ್ಲ.