ಇಸ್ಲಾಮಾಬಾದ್(ನ.07):ಇದೇ ನ.09ರಂದು ಭಾರತ-ಪಾಕಿಸ್ತಾನ ನಡುವಿನ ಕರ್ತಾರ್‌ಪುರ್‌ ಕಾರಿಡಾರ್ ಉದ್ಘಾಟನೆಗೊಳ್ಳಲಿದ್ದು, ಭಾರತೀಯ ಯಾತ್ರಾರ್ಥಿಗಳಿಗೆ ಪಾಸ್‌ಪೋರ್ಟ್ ಅವಶ್ಯಕತೆ ಇಲ್ಲ ಎಂದು ಪಾಕಿಸ್ತಾನ ಘೋಷಿಸಿದೆ.

ಕರ್ತಾರ್‌ಪುರ್ ಗುರುದ್ವಾರಕ್ಕೆ ವೀಸಾ ರಹಿತ ಪ್ರವೇಶಕ್ಕೆ ಪಾಕ್ ಅಸ್ತು!

ಆದರೆ ತನ್ನದೇ ಸರ್ಕಾರದ ಆದೇಶವನ್ನು ಧಿಕ್ಕರಿಸಿರುವ ಪಾಕ್ ಸೇನೆ, ಕರ್ತಾರ್‌ಪುರ್‌'ಗೆ ಭೇಟಿ ನೀಡುವ ಬಾರತೀಯ ಯಾತ್ರಾರ್ಥಿಗಳಿಗೆ  ಪಾಸ್‌ಪೋರ್ಟ್ ವಿನಾಯ್ತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಕರ್ತಾರ್‌ಪುರ್: ಗುರು-ಭಕ್ತರನ್ನು ಬೆಸೆಯುವ ಅಪರೂಪದ ಕಾರಿಡಾರ್!

ದೇಶದ ಭದ್ರತೆ ದೃಷ್ಟಿಯಿಂದ ಭಾರತೀಯ ಯಾತ್ರಾರ್ಥಿಗಳಿಗೆ ಪಾಸ್‌ಪೋರ್ಟ್ ವಿನಾಯ್ತಿ ನೀಡುವುದು ಸಾಧ್ಯವಿಲ್ಲ ಎಂದಿರುವ ಪಾಕ್ ಸೇನೆ, ಸರ್ಕಾರದ ಆದೇಶ ಪಾಲಿಸಲು ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿಕೆ ನೀಡಿದೆ.

ಕರ್ತಾರ್‌ಪುರ್ ಕಾರಿಡಾರ್ ಯೋಜನೆಗೆ ಸಹಿ ಹಾಕಿದ ಭಾರತ-ಪಾಕಿಸ್ತಾನ!

ಪಾಕ್ ಸರ್ಕಾರದ ಮೇಲಿರುವ ತನ್ನ ವಿಟೋ ಅಧಿಕಾರ ಬಳಸಿ ಪ್ರಧಾನಿ ಇಮ್ರಾನ್ ಖಾನ್ ಆದೇಶವನ್ನು ಸೇನೆ ರದ್ದುಗೊಳಿಸಿದೆ. ಈ ಕುರಿತು ಮಾತನಾಡಿರುವ ಪಾಕ್ ಸೇನಾ ವಕ್ತಾರ ಮೇಜರ್ ಜನರಲ್ ಆಸೀಫ್ ಗಫೂರ್, ಭದ್ರತೆ ಹಾಗೂ ಸಾರ್ವಭೌಮತ್ವದ ಬಗ್ಗೆ ಯಾವುದೇ ರಾಜಿ ಸಾಧ್ಯವಿಲ್ಲ ಎಂದಿದ್ದಾರೆ.

ಕರ್ತಾರ್‌ಪುರ್ ಕಾರಿಡಾರ್ ಉದ್ಘಾಟನೆ ಬಳಿಕ ಭಾರತೀಯ ಯಾತ್ರಾರ್ಥಿಗಳಿಗೆ ಪಾಸ್‌ಪೋರ್ಟ್ ಬದಲು ಯಾವುದೇ ಅಧಿಕೃತ ಗುರಿತಿನ ಚೀಟಿ ಇದ್ದರೆ ಸಾಕು ಎಂದು ಇಮ್ರಾನ್ ಸರ್ಕಾರ ಹೇಳಿತ್ತು. ಅಲ್ಲದೇ ಉದ್ಘಠನೆಗೊಂಡ ಮೊದಲ ಎರಡು ದಿನ ಭಾರತೋಉ ಯಾತ್ರಾರ್ಥಿಗಳಿಗೆ ಶುಲ್ಕ ವಿನಾಯ್ತಿ ಕೂಡ ಘೋಷಿಸಲಾಗಿದೆ.

ಕರ್ತಾರ್‌ಪುರ್: ಭಾರತೀಯ ಪ್ರವಾಸಿಗರಿಗೆ ಶುಲ್ಕ ವಿನಾಯ್ತಿ ಘೋಷಿಸಿದ ಇಮ್ರಾನ್!