ಇಸ್ಲಾಮಾಬಾದ್(ನ.01): ಇದೇ ನ.09 ಉದ್ಘಾಟನೆಗೊಳ್ಳಲಿರುವ ಭಾರತ-ಪಾಕಿಸ್ತಾನ ಕರ್ತಾರ್‌ಪುರ್ ಕಾರಿಡಾರ್‌ಗೆ ಸಂಬಂಧಿಸಿದಂತೆ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾರತೀಯ ಯಾತ್ರಿಗಳಿಗೆ  ಸಿಹಿ ಸುದ್ದಿ ನೀಡಿದ್ದಾರೆ.

ಕರ್ತಾರ್‌ಪುರ್ ಗುರುದ್ವಾರಕ್ಕೆ ವೀಸಾ ರಹಿತ ಪ್ರವೇಶಕ್ಕೆ ಪಾಕ್ ಅಸ್ತು!

ಗುರು ನಾನಕ್‌ರ 550ನೇ ಜಯಂತಿ ಅಂಗವಾಗಿ ಕರ್ತಾರ್‌ಪುರ್ ಗುರುದ್ವಾರಕ್ಕೆ ಬರುವ ಭಾರತೀಯ ಯಾತ್ರಿಕರಿಗೆ ಮೊದಲ ಎರಡು ದಿನ ಪ್ರವೇಶ ಶುಲ್ಕ ವಿನಾಯ್ತಿ ನೀಡಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ.

ಗುರುನಾನಕ್ ಜಯಂತಿ ಕಾರ್ಯಕ್ರಮ ಮತ್ತು ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆ ದಿನದಂದು ಆಗಮಿಸುವ ಭಾರತೀಯ ಭಕ್ತರಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಇಮ್ರಾನ್ ಹೇಳಿದ್ದಾರೆ.

ಕರ್ತಾರ್‌ಪುರ್: ಗುರು-ಭಕ್ತರನ್ನು ಬೆಸೆಯುವ ಅಪರೂಪದ ಕಾರಿಡಾರ್!

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಇಮ್ರಾನ್ ಖಾನ್, ಕರ್ತಾರ್‌ಪರ್‌ಕ್ಕೆ ಬರುವ ಭಾರತೀಯ ಭಕ್ತರಿಗೆ ಶುಲ್ಕ ವಿನಾಯ್ತಿ ನೀಡಲಾಗುವುದು ಎಂದಿದ್ದಾರೆ. ಅಲ್ಲದೇ ಪಾಸ್‌ಪೋರ್ಟ್ ಇಲ್ಲದೇ ಮತ್ತು ಮುಂಚಿತ ಬುಕ್ಕಿಂಗ್ ಇಲ್ಲದೇ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ ಎಂದು ಇಮ್ರಾನ್ ಸ್ಪಷ್ಟಪಡಿಸಿದ್ದಾರೆ.

ಕರ್ತಾರ್‌ಪುರ್ ಕಾರಿಡಾರ್ ಯೋಜನೆಗೆ ಸಹಿ ಹಾಕಿದ ಭಾರತ-ಪಾಕಿಸ್ತಾನ! 

ಕರ್ತಾರ್‌ಪುರ್‌ ಗುರುದ್ವಾರಕ್ಕೆ ಪ್ರಯಾಣಿಸುವ ಭಾರತೀಯ ಯಾತ್ರಿಕರಿಗೆ 20 ಡಾಲರ್ ಶುಲ್ಕ ವಿಧಿಸುವ ಪಾಕಿಸ್ತಾನದ ನಿರ್ಧಾರಕ್ಕೆ  ಭಾರತ ವಿರೋಧ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.