ಏರ್ ಸ್ಟ್ರೈಕ್ ಬಳಿಕ ಪಾಕ್‌ನ ಒಂದೊಂದೇ ಡ್ರೋಣ್‌ಗಳು ಭಾರತೀಯ ನೆಲಕ್ಕೆ ಬಂದು ಪೆಟ್ಟು ತಿಂದರೂ ಬುದ್ಧಿ ಕಲಿಯುತ್ತಿಲ್ಲ. ಇದೀಗ ಮತ್ತೊಂದು ಪಾಕ್ ಡ್ರೋಣ್ ಗಡಿಯೊಳಗೆ ನುಗ್ಗಿ ಬಂದಿದೆ.
ಶ್ರೀರಂಗಾನಗರ (ರಾಜಸ್ಥಾನ), (ಮಾ.09): ಭಾರತೀಯ ವಾಯುಗಡಿಯೊಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನದ ಡ್ರೋಣ್ ವೊಂದನ್ನು ಭದ್ರತಾ ಭದ್ರತಾ ಪಡೆ ಅಟ್ಟಾಡಿಸಿ ಗುಂಡಿನ ದಾಳಿ ನಡೆಸಿದೆ.
ಭಾರತೀಯ ಸೇನೆ ನಡೆಸಿದ ಗುಂಡಿನ ಸುರಿಮಳೆಗೆ ಪಾಕ್ ಡ್ರೋನ್ ಬಂದ ದಾರಿಗೆ ಸುಂಕವಿಲ್ಲದೆ ವಾಪಸ್ ಆಗಿದೆ. ಇಂದು (ಶನಿವಾರ) ಬೆಳಗ್ಗೆ ರಾಜಸ್ಥಾನದ ಶ್ರೀರಂಗಾನಗರದ ಬಳಿ ಪಾಕಿಸ್ತಾನದ ಡ್ರೋಣ್ ಹಾರಾಡುತ್ತಿತ್ತು.
ಗಡಿಯೊಳಗೆ ಕದ್ದು ಹಾರಾಟ ಮಾಡ್ತಿದ್ದ ಪಾಕ್ ಡ್ರೋಣ್ ಢಮಾರ್!
ಇದನ್ನ ಗಮನಿಸಿದ ಬಿಎಸ್ಎಫ್ ಯೋಧರು, ತಕ್ಷಣ ಕಾರ್ಯಪ್ರವೃತ್ತರಾಗಿ ಡ್ರೋಣ್ ಮೇಲೆ ಗುಂಡಿನ ಸುರಿಮಳೆಗೈದರು. ಬಳಿಕ ಡ್ರೋಣ್ ಬಂದ ದಾರಿಗೆ ವಾಪಸ್ ಹಾರಿಹೋಗಿದೆ.
ಏರ್ ಸ್ಟ್ರೈಕ್ ದಾಳಿ ಬಳಿಕ ಈಗಾಗಲೇ ಪಾಕ್‌ನ ಎರಡು ಡ್ರೋಣ್‌ಗಳು ಪದೇ-ಪದೇ ಭಾರತೀಯ ಗಡಿಯೊಳಗೆ ನುಗ್ಗಿ ಪೆಟ್ಟು ತಿಂದಿವೆ.
