ನವದೆಹಲಿ[ಮಾ. 04] ನಿರಂತರವಾಗಿ ಕದನ ವಿರಾಮ ಉಲ್ಲಂಘನೆ ಮಾಡುತ್ತಲೇ ಇರುವ ಪಾಕಿಸ್ತಾನ ಸೋಮವಾರ ಮತ್ತೆ ಕೀಟಲೆ ಮಾಡಿದೆ. ರಾಜಸ್ಥಾನ ಗಡಿ ಬಳಿ ಪಾಖ್ ಕಿರಿಕ್ ಮಾಡಿದೆ.

ಪಾಕಿಸ್ತಾನದಿಂದ ಡ್ರೋನ್‌ವೊಂದು ದೇಶದ ಗಡಿಯೊಳಗೆ ಹಾರಾಟ ನಡೆಸಿರುವುದು ವರದಿಯಾಗಿದೆ. ತಕ್ಷಣ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ಅದನ್ನು ಹೊಡೆದುರುಳಿಸಿವೆ. ಸುಖೋಯ್‌ ಯುದ್ಧ ವಿಮಾನ ಪಾಕಿಸ್ತಾನಕ್ಕೆ ಸರಿಯಾದ ಬುದ್ಧಿ ಕಲಿಸಿದೆ.

'ಉಗ್ರರ ಶವಗಳನ್ನು ಲೆಕ್ಕ ಮಾಡೋದು ನಮ್ಮ ಕೆಲಸವಲ್ಲ’

ರಾಜಸ್ಥಾನದ ಬಿಕೆನೇರ್‌ ಸಮೀಪ ಈ ಡ್ರೋನ್‌ ಹಾರಾಟ ನಡೆಸಿತ್ತು. ಭಾರತೀಯ ವಾಯು ಗಡಿ ದಾಟಿ ಬರುತ್ತಿದ್ದಂತೆ ಭಾರತೀಯ ಯುದ್ಧ ವಿಮಾನಗಳು ಸಜ್ಜಾಗಿ ಡ್ರೋನ್‌ ಹೊಡೆದುರುಳಿಸಿತು.