ನವದೆಹಲಿ[ಮಾ.05]: ಭಾರತೀಯ ವಾಯುಸೇನೆ ಗಡಿ ನಿಯಂತ್ರಣಾ ರೇಖೆ ದಾಟಿ ಪಾಕ್ ಗಡಿಯ ಬಾಲಾಕೋಟ್ ನಲ್ಲಿದ್ದ ಉಗ್ರ ನೆಲೆಗಳನ್ನು ಧ್ವಂಸಗೊಳಿಸಿತ್ತು. ರಾತ್ರೋ ರಾತ್ರಿ ನಡೆದ ಈ ಏರ್ ಸ್ಟ್ರೈಕ್ ವಿಶ್ವದಾದ್ಯಂತ ಸಂಚಲನ ಮೂಡಿಸಿತ್ತು. ಈ ದಾಳಿಗೆ ಆರಂಭದಲ್ಲಿ ಎಷ್ಟೇ ಪ್ರಶಂಸೆ ವ್ಯಕ್ತವಾಗಿದ್ದರೂ ದಿನಗಳೆದಂತೆ ದಾಳಿಯಲ್ಲಿ ಎಷ್ಟು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎಂಬ ವಿಚಾರ ಗೊಂದಲ ಮೂಡಿಸಿದ್ದಲ್ಲದೇ, ಭಾರೀ ಚರ್ಚೆ ಹುಟ್ಟು ಹಾಕಿದೆ. ಆದರೀಗ ಇಟಾಲಿಯನ್ ಪತ್ರಕರ್ತೆ ಹತರಾದ ಉಗ್ರರ ಸಂಖ್ಯೆ ಎಷ್ಟು ಎಂದು ಖಚಿತವಾಗಿ ಹೇಳಿಕೊಂಡಿದ್ದಾರೆ.

ಎಫ್‌-16 ಹೊಡೆಯಲು ಮಿಗ್‌ ಬಳಸಿದ್ದೇಕೆ?: ಧನೋವಾ ನೀಡಿದ ಅಚ್ಚರಿಯ ಉತ್ತರ!

ವಿಯೋನ್ ಟಿವಿಗೆ ಸಂದರ್ಶನ ನೀಡಿರುವ ಇಟಾಲಿಯನ್ ಪತ್ರಕರ್ತೆ ಫ್ರಾನ್ಸಿಸ್ಕಾ ಮರಿನೊ 'ನನ್ನ ಮಾಹಿತಿ ಪ್ರಕಾರ ಭಾರತೀಯ ವಾಯುಸೇನೆ ನಡೆಸಿದ ಈ ದಾಳಿಯಲ್ಲಿ 40-50 ಉಗ್ರರು ಹತರಾಗಿದ್ದು, 35-40 ಮಂದಿ ಗಾಯಗೊಂಡಿದ್ದಾರೆ. ಇದು ಶೇ. 100% ಖಚಿತ ಮಾಹಿತಿ. ನನಗೆ ಸಿಕ್ಕ ಮಾಹಿತಿ ಮೇಲೆ ನನಗೆ ನಂಬಿಕೆ ಇದೆ' ಎಂದಿದ್ದಾರೆ.

ಈ ಹಿಂದೆ ಭಾರತದ ವಿದೇಶಾಂಗ ಕಾರ್ಯದರ್ಶಿ ಈ ವಿಚರವಾಗಿ ಮಾತನಾಡುತ್ತಾ 'ಬಹುದೊಡ್ಡ ಸಂಖ್ಯೆಯಲ್ಲಿ ಉಗ್ರರು ಹತರಾಗಿದ್ದಾರೆ' ಎಂದಿದ್ದರು. ಇದಾದ ಬಳಿಕ ರಾಷ್ಟ್ರೀಯ ಮಾಧ್ಯಮಗಳು 300 ಉಗ್ರರು ಹತರಾಗಿರುವ ಸಾಧ್ಯತೆಗಳಿವೆ ಎಂದು ಸುದ್ದಿ ಪ್ರಸಾರ ಮಾಡಿದ್ದವು. ಈ ಗೊಂದಲಗಳ ನಡುವೆ ಇಟಾಲಿಯನ್ ಪತ್ರಕರ್ತೆ ಮಾತ್ರ ತಾನು ನೀಡಿರುವ ಮಾಹಿತಿ ಖಚಿತವಾದದ್ದು ಎಂದಿದ್ದಾರೆ.

ಉಗ್ರರ ಅಡ್ಡೆ ಬಗ್ಗೆ ಪಾಕ್‌ ಸುಳ್ಳಿಗೆ ಮತ್ತೊಂದು ಸಾಕ್ಷ್ಯ: ಸಕ್ರಿಯವಾಗಿದ್ದವು 300 ಮೊಬೈಲ್‌!

ಪುಲ್ವಾಮಾ ದಾಳಿಯಲ್ಲಿ ಭಾರತೀಯ ಸೇನೆಯ 40 ಯೋಧರು ಹುತಾತ್ಮರಾದ ಬಳಿಕ ಪ್ರತೀಕಾರವೆಂಬಂತೆ ಭಾರತೀಯ ವಾಯುಸೇನೆಯ ಮಿರಾಜ್ 2000 ಯುದ್ಧ ವಿಮಾನದ ಮೂಲಕ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಗಳ ಪ್ರಮುಖ ಕ್ಯಾಂಪ್ಗಳನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ನಡೆಸಿತ್ತು. ಇದಾದ ಬಳಿಕ ಮಾ. 05ರಂದು ಮೊದಲ ಬಾರಿ ದಾಳಿ ಕುರಿತಾಗಿ ಪ್ರತಿಕ್ರಿಯಿಸಿದ್ದ ವಾಯುಸೇನೆಯ ಚೀಫ್ ಏರ್ ಮಾರ್ಷಲ್ ಬಿ. ಎಸ್ ಧನೋವಾ ಗುರಿಯನ್ನು ಭೇದಿಸುವುದಷ್ಟೇ ನಮ್ಮ ಕೆಲಸ, ಶವ ಎಣಿಸುವುದಲ್ಲ ಎಂದಿದ್ದರು.