ಕ್ರಿಕೆಟ್ ಹಾಗೂ ಸಂಗೀತ ಮಾಂತ್ರಿಕರಿಗೆ ಒಲಿದು ಬಂದ ಅತ್ಯುನ್ನತ ನಾಗರಿಕ ಪ್ರಶಸ್ತಿ

First Published 25, Jan 2018, 11:23 PM IST
Padma Awards For Musician I Ilaiyaraja Cricketer MS Dhoni
Highlights

ಕೇಂದ್ರ ಸರ್ಕಾರ ಒಟ್ಟು 85 ಮಂದಿಗೆ ಪದ್ಮ ಪ್ರಶಸ್ತಿಯನ್ನು ನೀಡಿದ್ದು ಮೂವರಿಗೆ ಪದ್ಮವಿಭೂಷಣ, 9 ಮಂದಿಗೆ ಪದ್ಮಭೂಷಣ ಹಾಗೂ 73 ಮಂದಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ನವದೆಹಲಿ(.25):  ಮೂರು ವಿಧದ ಕ್ರಿಕೆಟ್ ವಿಶ್ವಕಪ್ ಟ್ರೋಫಿಯನ್ನು ಭಾರತದ ಮುಡಿಗೇರಿಸಲು ನೇತೃತ್ವ ವಹಿಸಿದ್ದ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಪದ್ಮಭೂಷಣ  ಹಾಗೂ 6500 ಹಾಡುಗಳಿಗೆ ಸಂಗೀತ ಸಂಯೋಜನೆ ನೀಡಿದ್ದ ಭಾರತದ ಸಂಗೀತ ಮಾಂತ್ರಿಕ ಎಂದೆ ಖ್ಯಾತಿ ಗಳಿಸಿರುವ ಇಳಿಯರಾಜ ಅವರಿಗೆ ಭಾರತದ 2ನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣ ಲಭಿಸಿದೆ.

ಕೇಂದ್ರ ಸರ್ಕಾರ ಒಟ್ಟು 85 ಮಂದಿಗೆ ಪದ್ಮ ಪ್ರಶಸ್ತಿಯನ್ನು ನೀಡಿದ್ದು ಮೂವರಿಗೆ ಪದ್ಮವಿಭೂಷಣ, 9 ಮಂದಿಗೆ ಪದ್ಮಭೂಷಣ ಹಾಗೂ 73 ಮಂದಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ಇಳಯರಾಜ ಅವರು ತಮಗೆ ಗೌರವಿಸಿರುವ ಪ್ರಶಸ್ತಿಯನ್ನು ಪ್ರಧಾನಿ ಮೋದಿ ತಮಿಳು ನಾಡು ಹಾಗೂ ತಮಿಳು ಜನರಿಗೆ ಅರ್ಪಿಸಿರುವ ಗೌರವ ಎಂದು ತಿಳಿಸಿದ್ದಾರೆ. ಪ್ರಶಸ್ತಿ ಪಡೆದವರಲ್ಲಿ 97 ವರ್ಷದ ಕನ್ನಡತಿ ಸೂಲಗತ್ತಿ ನರಸಮ್ಮ ಹಾಗೂ 99 ವರ್ಷದ ಟೆಬಿಟಿಯನ್ ಸ್ವಾತಂತ್ರ ಹೋರಾಟಗಾರೊಬ್ಬರಿಗೆ ಲಭಿಸಿದೆ.

loader