ಸುಳ್ಳು ಭರವಸೆ ನೀಡಿದ್ದಕ್ಕೆ ಪ್ರಾಯಶ್ಚಿತವಾಗಿ ಉಪವಾಸ ಆಚರಿಸಿ: ಮೋದಿಗೆ ಒವೈಸಿ ಟಾಂಗ್

First Published 11, Apr 2018, 6:57 PM IST
Owaisi asks PM to observe fast to atone for his false promises
Highlights
  • ವಿರೋಧ ಪಕ್ಷದವರಿಂದ ಸಂಸತ್ ಕಲಾಪಕ್ಕೆ ಅಡ್ಡಿ
  • ಪ್ರಧಾನಿ ಮೋದಿ ಗುರುವಾರದಂದು ಉಪವಾಸ

ನವದೆಹಲಿ: ವಿರೋಧ ಪಕ್ಷದವರು ಸಂಸತ್ ಕಲಾಪವನ್ನು ಅಡ್ಡಿ ಪಡಿಸುತ್ತಿರುವ ನಡೆ ವಿರೋಧಿಸಿ ಪ್ರಧಾನಿ ಮೋದಿ ಗುರುವಾರದಂದು ಉಪವಾಸವನ್ನಾಚರಿಸಲಿದ್ದು, ಎಐಎಂಐಎಂ ಮುಖಂಡ ಅಸಾದುದ್ದೀನ್ ಒವೈಸಿ ಟಾಂಗ್ ನೀಡಿದ್ದಾರೆ.

ಸುಳ್ಳು ಭರವಸೆಗಳು ನೀಡಿದ್ದಕ್ಕೆ, ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಾಗೂ ಉದ್ಯೋಗ ಸೃಷ್ಟಿಸಲು ವಿಫಲರಾಗಿರುವುದಕ್ಕೆ ಯಾಕೆ ಪ್ರಧಾನಿ ಮೋದಿ ಉಪವಾಸ ಕೈಗೊಂಡಿಲ್ಲವೆಂದು ಒವೈಸಿ ಪ್ರಶ್ನಿಸಿದ್ದಾರೆ.

ಉಪವಾಸ ಆಚರಿಸುವುದಿದ್ದರೆ  ರೈತರ ಆತ್ಮಹತ್ಯೆಗಳಿಗೆ, ಹೆಣ್ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರಕ್ಕೆ ಪ್ರಾಯಶ್ಚಿತವಾಗಿ ಪ್ರಧಾನಿ ಮೋದಿ ಉಪವಾಸ ಆಚರಿಸಿವುದಿಲ್ಲವೆಂದು ಒವೈಸಿ ಪ್ರಶ್ನಿಸಿದ್ದಾರೆ.

ವಿರೋಧ ಪಕ್ಷದವರು ಸಂಸತ್ ಕಲಾಪವನ್ನು ಅಡ್ಡಿ ಪಡಿಸುತ್ತಿರುವ ನಡೆ ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ (ಏ.12) ರಂದು ಒಂದು ದಿನದ ಉಪವಾಸ ಕೈಗೊಳ್ಳುತ್ತಿದ್ದಾರೆ.

ಪ್ರಧಾನಿಯವವರು ಉಪವಾಸ ಕೈಗೊಂಡರೂ ನಿತ್ಯದ ಕಚೇರಿ ಕಾರ್ಯಚಟುವಟಿಕೆಗಳಿಗೆ ಯಾವುದೇ ಕುಂದುಂಟಾಗುವುದಿಲ್ಲ. ಎಂದಿನಂತೆ  ಕಡತಗಳ ವಿಲೇವಾರಿಗಳನ್ನು ಪರಿಶೀಲಿಸಲಿದ್ದಾರೆ. ಸಾರ್ವಜನಿಕರೊಂದಿಗೆ ಸಭೆಗಳನ್ನು ನಡೆಸಲಿದ್ದಾರೆ. ಅಲ್ಲದೆ ನಾಳೆ ಜ್ಯೋತಿಬಾಫುಲೆ ಜನ್ಮದಿನಾಚರಣೆ ಪ್ರಯುಕ್ತ ವಿಡಿಯೋ ಕಾನ್ಫೆರನ್ಸ್ ಮೂಲಕ ಸಂಸದರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

loader