19 ಶಾಸಕರನ್ನು ಸ್ಪೀಕರ್ ಅಮಾನತುಗೊಳಿಸಿದ್ದಾರೆ. ಅಮಾನತು ಕ್ರಮವನ್ನು ಅಸಂವಿಧಾನ ಕ್ರಮವೆಂದು ಖಂಡಿಸಿರುವ ಶಾಸಕರು ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿದ್ದು, ರಾಜ್ಯಪಾಲ ಸಿ.ವಿದ್ಯಾಸಾಗರ್ ಅವರಿಗೂ ದೂರು ನೀಡುವುದಾಗಿ ತಿಳಿಸಿದ್ದಾರೆ.
ಮುಂಬೈ(ಮಾ.22): ಬಜೆಟ್ ಮಂಡನೆ ವೇಳೆ ದುರ್ವರ್ತನೆ ತೋರಿದ ಆರೋಪದ ಮೇಲೆ ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ 19 ಮಂದಿ ಶಾಸಕರನ್ನು 9 ತಿಂಗಳು ಅಮಾನತುಗೊಳಿಸಲಾಗಿದೆ.
ಆಡಳಿತರೂಢ ಭಾರತೀಯ ಜನತಾ ಪಕ್ಷವು ಆಯವ್ಯಯ ಮಂಡಿಸುತ್ತಿದ್ದ ಸಮಯದಲ್ಲಿ ಕಾಂಗ್ರೆಸ್ - ಎನ್'ಸಿಪಿ ಮೈತ್ರಿಕೂಟದ ವಿರೋಧ ಪಕ್ಷದ ಶಾಸಕರು ಬಜೆಟ್ ಮಂಡನೆಗೆ ತೊಂದರೆ ನೀಡುತ್ತಿದ್ದರು. ಗದ್ದಲ ಹೆಚ್ಚಾದ ಕಾರಣ ಅಧಿವೇಶನನ್ನು ಮುಂದೂಡಿ 19 ಶಾಸಕರನ್ನು ಸ್ಪೀಕರ್ ಅಮಾನತುಗೊಳಿಸಿದ್ದಾರೆ. ಅಮಾನತು ಕ್ರಮವನ್ನು ಅಸಂವಿಧಾನ ಕ್ರಮವೆಂದು ಖಂಡಿಸಿರುವ ಶಾಸಕರು ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿದ್ದು, ರಾಜ್ಯಪಾಲ ಸಿ.ವಿದ್ಯಾಸಾಗರ್ ಅವರಿಗೂ ದೂರು ನೀಡುವುದಾಗಿ ತಿಳಿಸಿದ್ದಾರೆ.
ಮಹಾರಾಷ್ಟ್ರ ಹಣಕಾಸು ಸಚಿವ ಸುಧೀರ್ ಸುಧೀರ್ ಮುಂಗಾಂತೀವಾರ್ ಅವರು ಈ ವರ್ಷದ ಆಯವ್ಯಯ ಮಂಡಿಸುವಾಗ ರೈತರ ಸಾಲ ಮನ್ನಾ ಮಾಡಬೇಕೆಂದು ಅಮಾನತುಗೊಂಡು ಶಾಸಕರು ಸದನದಲ್ಲಿ ಗದ್ದಲವೆಬ್ಬಿಸಿದ್ದರು. ಅಲ್ಲದೆ ಆಯವ್ಯದ ಪ್ರತಿಗಳನ್ನು ಸದನದ ಹೊರಗಡೆ ಸುಟ್ಟು ಹಾಕಿದ್ದರು. ಈ ಹಿನ್ನಲೆಯಲ್ಲಿ ದುರ್ವರ್ತನೆ ತೋರಿದ ಆರೋಪದ ಮೇಲೆ ಡಿಸೆಂಬರ್ 31ರ ವರೆಗೂ ಅಮಾನತುಗೊಳಿಸಲಾಗಿದೆ.
