ಶೀಮ್ಲಾ (ಸೆ. 24): ಮುಂಗಾರು ಆರ್ಭಟದಿಂದ ಈರುಳ್ಳಿ ಉತ್ಪಾದನೆ ಕುಂಠಿತಗೊಂಡು, ದರ ಎಲ್ಲೆಡೆ ಏರಿಕೆ ಕಾಣುತ್ತಿದೆ. ವಿಶೇಷವೆಂದರೆ ಹಿಮಾಚಲಪ್ರದೇಶದಲ್ಲಿ ಈರುಳ್ಳಿಗಿಂತಲೂ ಸೇಬು ಹಣ್ಣು ಅಗ್ಗದ ದರದಲ್ಲಿ ಸಿಗುತ್ತಿದೆ. ಶಿಮ್ಲಾದ ಮಾರುಕಟ್ಟೆಯಲ್ಲಿ ಪ್ರತಿ ಕೇಜಿ ಸೇಬು 30 ರು.ಗೆ ಸಿಗುತ್ತಿದೆ.

ಗಗನಕ್ಕೇರಿದ ಈರುಳ್ಳಿ ದರ: ದೆಹಲಿಯಲ್ಲಿ ಕೆಜಿಗೆ 80 ರು!

ಆದರೆ, ಈರುಳ್ಳಿ ದರ 90 ರು.ಗೆ ಏರಿ ಕಣ್ಣಲ್ಲಿ ನೀರು ತರಿಸಿದೆ. ಅಧಿಕ ತೇವಾಂಶದಿಂದ ಈರುಳ್ಳಿ ಉತ್ಪಾದನೆ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಮತ್ತೊಂದೆಡೆ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದು, ವರ್ತಕರು ಹೆಚ್ಚಿನ ದಾಸ್ತಾನು ಮಾಡಿದ್ದು, ದರ ಏರಿಕೆಗೆ ಕಾರಣವಾಗಿದೆ. ಸರ್ಕಾರ ಆಷ್ಘಾನಿಸ್ತಾನದ ಮೂಲಕ ಈರುಳ್ಳಿ ಆಮದು ಮಾಡಿಕೊಳ್ಳಲು ಸಜ್ಜಾಗಿದೆ. ಅಲ್ಲದೇ ಅ.15 ರೊಳಗೆ ಈಜಿಪ್ಟ್‌ನಿಂದಲೂ ಈರುಳ್ಳಿ ಆಮದಾಗಲಿದೆ ಎನ್ನಲಾಗಿದೆ.