ಒಂದು ದೇಶ ಒಂದು ಚುನಾವಣೆ ಎಂಬ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾನೂನು ಆಯೋಗದ ಪ್ರಸ್ತಾಪಕ್ಕೆ ಇದೀಗ ಉತ್ತರ ಪ್ರದೇಶ ಸರ್ಕಾರದಿಂದ  ಮೊದಲ ಬೆಂಬಲ ವ್ಯಕ್ತವಾಗಿದೆ. 

ಲಖ್ನೋ: ಒಂದು ದೇಶ ಒಂದು ಚುನಾವಣೆ ಎಂಬ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾನೂನು ಆಯೋಗದ ಪ್ರಸ್ತಾವವನ್ನು ಉತ್ತರಪ್ರದೇಶದ ಯೋಗಿ ಸರ್ಕಾರ ಬೆಂಬಲಿಸಿದೆ. ಹೀಗೆ ಕೇಂದ್ರದ ಯೋಜನೆ ಬೆಂಬಲಿಸಿದ ಮೊದಲ ರಾಜ್ಯ ಕೂಡಾ ಹೌದು.

ವಿಧಾನಸಭೆ ಮತ್ತು ಲೋಕಸಭೆಗೆ ಒಟ್ಟಿಗೆ ಚುನಾವಣೆ ನಡೆಸಬೇಕು. ಮುಂದಿನ ಹಂತದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನೂ ಇದಕ್ಕೆ ಜೋಡಿಸಬೇಕು ಎಂದು ಯುಪಿ ಸರ್ಕಾರಕ್ಕೆ ಸಮಿತಿಯೊಂದು ವರದಿ ಸಲ್ಲಿಸಿದೆ.

ಸಿಎಂ ಯೋಗಿ ಅವರೇ ಆರೋಗ್ಯ ಸಚಿವ ಸಿದ್ಧಾರ್ಥನಾಥ್‌ ಸಿಂಗ್‌ ನೇತೃತ್ವದಲ್ಲಿ 7 ಜನರ ಈ ಸಮಿತಿ ರಚಿಸಿದ್ದರು.