ಇಂದಿನಿಂದ ಬ್ಯಾಂಕ್ ಹೊರತು ಪಡಿಸಿ ಹಳೆಯ 500 ರೂಪಾಯಿ ನೋಟು ಬೇರೆಲ್ಲೂ ಚಲಾವಣೆಗೆ ಅವಕಾಶವಿಲ್ಲ. ಸರ್ಕಾರ ಕೂಡ ಹಳೆಯ ನೋಟು ಚಲಾವಣೆಯ ಅವಧಿ ವಿಸ್ತರಿಸಲು ನಿರಾಕರಿಸಿದೆ.

ನವದೆಹಲಿ(ಡಿ.16): ನೋಟ್ ಬ್ಯಾನ್'ನಿಂದ ಜನರ ಮೂಲಭೂತ ಹಕ್ಕುಗಳು ಉಲ್ಲಂಘನೆಯಾಗಿದೆಯೇ, ಅಥವಾ ಕಾನೂನು ಬದ್ಧವಾಗಿದೆಯೇ ಎಂದು ಐದು ಹಿರಿಯ ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠ ತೀರ್ಮಾನಿಸಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಕಳೆದ ತಿಂಗಳು 500 ಹಾಗೂ 1000 ರೂಪಾಯಿ ನೋಟುಗಳನ್ನು ಕೇಂದ್ರ ಸರ್ಕಾರ ಅಮಾನ್ಯ ಮಾಡಿರುವ ಕ್ರಮಕ್ಕೆ ತಡೆ ನೀಡಬೇಕು ಎಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಈ ರೀತಿ ಅಭಿಪ್ರಾಯಪಟ್ಟಿದೆ.

ಸರ್ಕಾರದ ಆರ್ಥಿಕ ನೀತಿಗಳಲ್ಲಿ ಕೋರ್ಟ್ ಮಧ್ಯಪ್ರವೇಶಿಸಬಹುದೇ ಎನ್ನುವ ಕುರಿತಂತೆಯೂ ಐದು ನ್ಯಾಯಾಧೀಶರನ್ನೊಳಗೊಂಡ ತಂಡ ಚರ್ಚೆ ನಡೆಸಲಿದೆ.

ಇಂದಿನಿಂದ ಬ್ಯಾಂಕ್ ಹೊರತು ಪಡಿಸಿ ಹಳೆಯ 500 ರೂಪಾಯಿ ನೋಟು ಬೇರೆಲ್ಲೂ ಚಲಾವಣೆಗೆ ಅವಕಾಶವಿಲ್ಲ. ಸರ್ಕಾರ ಕೂಡ ಹಳೆಯ ನೋಟು ಚಲಾವಣೆಯ ಅವಧಿ ವಿಸ್ತರಿಸಲು ನಿರಾಕರಿಸಿದೆ. ಹೀಗಾಗಿ ಮತ್ತೊಮ್ಮೆ ಎಟಿಎಂ ಹಾಗೂ ಬ್ಯಾಂಕ್'ಗಳ ಮುಂದೆ ಸರತಿ ಸಾಲುಗಳು ಹೆಚ್ಚುತ್ತಿದೆ.