Asianet Suvarna News Asianet Suvarna News

ಒಮರ್ ಅಬ್ದುಲ್ಲಾ ರನ್ನು ವಿಮಾನ ನಿಲ್ದಾಣದಲ್ಲೇ 2 ಗಂಟೆ ಕಾಯಿಸಿದರು

ಪ್ರತೀ ಬಾರಿ ಅಮೆರಿಕ ದೇಶಕ್ಕೆ ಹೋದಾಗಲೆಲ್ಲಾ ನಾನು ಈ ಸಮಸ್ಯೆಯನ್ನು ಎದುರಿಸುತ್ತಿರುತ್ತೇನೆ

Omar Abdullah detained at US airport for checks

ನ್ಯೂಯಾರ್ಕ್(ಅ.17): ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ  ಅವರನ್ನು ಪರಿಶೀಲನೆಗಾಗಿ 2 ಗಂಟೆಗಳ ಕಾಲ ಕಾಯಿಸಿದ  ಘಟನೆ ಅಮೆರಿಕದ ವಿಮಾನ ನಿಲ್ದಾಣದಲ್ಲಿ  ನಡೆದಿದೆ. ಈ ಕುರಿತಂತೆ ಟ್ವಿಟರ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಒಮರ್ ಅಬ್ದುಲ್ಲಾ , ಅಮೆರಿಕ ದೇಶಕ್ಕೆ ನಾನು ಇದು 3ನೇ ಬಾರಿ ಭೇಟಿ ನೀಡುತ್ತಿದ್ದು, ಮೂರನೇ ಬಾರಿ ಕೂಡ ನನಗೆ ಸಮಸ್ಯೆ ಎದುರಾಗಿದೆ.

ಅಮೆರಿಕ ವಿಮಾನ ನಿಲ್ದಾಣದಲ್ಲಿ  2 ಗಂಟೆಗಳ ಕಾಲ ಉಳಿಯಬೇಕಾಯಿತು. ವಿಮಾನ ನಿಲ್ದಾಣದಲ್ಲಿ ನಡೆಸಲಾಗುತ್ತಿರುವ ಹೆಚ್ಚುವರಿ ತಪಾಸಣೆ ಸಾಕಷ್ಟು ಬೇಸರವನ್ನುಂಟು ಮಾಡಿದೆ. ಪ್ರತೀ ಬಾರಿ ಅಮೆರಿಕ ದೇಶಕ್ಕೆ ಹೋದಾಗಲೆಲ್ಲಾ ನಾನು ಈ ಸಮಸ್ಯೆಯನ್ನು ಎದುರಿಸುತ್ತಿರುತ್ತೇನೆಂದು ಹೇಳಿದ್ದಾರೆ. ಎನ್ ವೈಯು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಅಮೆರಿಕಾಗೆ ಬಂದಿದ್ದೆ. ಆದರೆ, 2 ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲೇ ವ್ಯರ್ಥವಾಗಿಯಿತು. ಇದರ ಬದಲು ಮನೆಯಲ್ಲಿಯೇ ಇರಬಹುದಿತ್ತು ಎಂದು ಹೇಳಿಕೊಂಡಿದ್ದಾರೆ.

Follow Us:
Download App:
  • android
  • ios