ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿ ಘೋಷಣೆ| ಪೋಲೆಂಡ್​ನ ಓಲ್ಗಾ ಟೊಕಾರ್ಚುಕ್ ಮತ್ತು ಆಸ್ಟ್ರಿಯಾದ ಪೀಟರ್ ಹ್ಯಾಂಡ್ಕೆ| ಪೋಲೆಂಡ್​ನ ಬರಹಗಾರ್ತಿಗೆ 2018ರ ಸಾಲಿನ ಪ್ರಶಸ್ತಿ ಸಂದಾಯ| ಆಸ್ಟ್ರಿಯಾದ ಸಾಹಿತಿಗೆ ಪ್ರಸಕ್ತ ಸಾಲಿನ ಸಾಲಿನ ಪ್ರಶಸ್ತಿ ಪ್ರಕಟ| ತಲಾ 8.28 ಲಕ್ಷ ಯೂರೋ (ಸುಮಾರು 6.5 ಕೋಟಿ ರೂ.) ಮೊತ್ತದ ಚೆಕ್| 

ಸ್ಟಾಕ್‌ಹೋಮ್(ಅ.10): ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದ್ದು, ಪೋಲೆಂಡ್​ನ ಓಲ್ಗಾ ಟೊಕಾರ್ಚುಕ್ ಮತ್ತು ಆಸ್ಟ್ರಿಯಾದ ಪೀಟರ್ ಹ್ಯಾಂಡ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪೋಲೆಂಡ್​ನ ಬರಹಗಾರ್ತಿಗೆ 2018ರ ಸಾಲಿನ ಪ್ರಶಸ್ತಿ ಸಂದಾಯವಾದರೆ, ಆಸ್ಟ್ರಿಯಾದ ಸಾಹಿತಿಗೆ ಪ್ರಸಕ್ತ ಸಾಲಿನ ಸಾಲಿನ ಪ್ರಶಸ್ತಿ ಲಭಿಸಿದೆ.

2018ರ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಸ್ವೀಡಿಷ್ ಅಕಾಡೆಮಿಯಲ್ಲಿ ಲೈಂಗಿಕ ಹಗರಣ ಬೆಳಕಿಗೆ ಬಂದ ಪರಿಣಾಮ ತಡೆ ಹಿಡಿಯಲಾಗಿತ್ತು. ಇದೀಗ ಕಳೆದ ವರ್ಷದ ಪ್ರಶಸ್ತಿ ಘೋಷಿಸಲಾಗಿದ್ದು, ಓಲ್ಗಾ ಟೊಕಾರ್ಚುಕ್ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Scroll to load tweet…

ಇಬ್ಬರೂ ಸಾಹಿತ್ಯಕಾರರಿಗೆ ಪ್ರಶಸ್ತಿ ಜೊತೆಗೆ ತಲಾ 8.28 ಲಕ್ಷ ಯೂರೋ (ಸುಮಾರು 6.5 ಕೋಟಿ ರೂ.) ಮೊತ್ತದ ಚೆಕ್ ಘೋಷಣೆ ಮಾಡಲಾಗಿದೆ.

ಆಸ್ಟ್ರಿಯಾದ ಜರ್ಮನ್ ಭಾಷಾ ಸಾಹಿತಿಯಾಗಿರುವ ಪೀಟರ್ ಹ್ಯಾಂಡ್ಕೆ ಬರಹಗಳಲ್ಲಿ ಸೂಕ್ಷ್ಮ ಸಂವೇದನೆಯೇ ಪ್ರಮುಖ ಅಂಶವಾಗಿದೆ. ತಮ್ಮ ಕಥೆ ಮತ್ತು ಕಾದಂಬರಿಗಳಲ್ಲಿ ಮಾನವನ ಅನುಭವ ಮತ್ತು ಅನುಭೂತಿಯನ್ನು ಬಹಳ ಸೂಕ್ಷ್ಮವಾಗಿ ಕಟ್ಟಿಕೊಡುತ್ತಾರೆ.

Scroll to load tweet…

1942ರಲ್ಲಿ ಜನಸಿದ ಹ್ಯಾಂಡ್ಕೆ 1966ರಲ್ಲಿ ತಮ್ಮ ಮೊದಲ ಕಾದಂಬರಿ ಪ್ರಕಟಿಸಿದ್ದರು. ಹಿಂದಿನ ಯುಗೋಸ್ಲಾವಿಯಾ ಯುದ್ಧದ ಅನುಭವಗಳನ್ನು ಅವರು ತಮ್ಮ ಕೆಲ ಸಾಹಿತ್ಯದಲ್ಲಿ ಜೀವಂತವಾಗಿ ತುಂಬಿದ್ದಾರೆ.