ಮೊಬೈಲ್‌ ಬ್ಯಾಟರಿ ಆವಿಷ್ಕರಿಸಿದ ಮೂವರಿಗೆ ಕೆಮಿಸ್ಟ್ರಿ ನೊಬೆಲ್‌!

ಮೊಬೈಲ್‌ ಬ್ಯಾಟರಿ ಆವಿಷ್ಕರಿಸಿದ ಮೂವರಿಗೆ ಕೆಮಿಸ್ಟ್ರಿ ನೊಬೆಲ್‌| ಮೂವರಲ್ಲಿ 97 ವರ್ಷದ ವಿಜ್ಞಾನಿ ಗುಡ್‌ಎನಫ್‌ ಕೂಡ ಒಬ್ಬರು| ನೊಬೆಲ್‌ ಗಿಟ್ಟಿಸಿದ ಈವರೆಗಿನ ಅತಿ ಹಿರಿಯ ಎಂಬ ಖ್ಯಾತಿ

Nobel Prize in Chemistry awarded for work on lithium ion batteries that revolutionized our lives

ಸ್ಟಾಕ್‌ಹೋಮ್‌[ಅ.10]: ಮೊಬೈಲ್‌ ಫೋನ್‌, ಲ್ಯಾಪ್‌ಟಾಪ್‌ ಹಾಗೂ ಇಲೆಕ್ಟ್ರಿಕ್‌ ಕಾರುಗಳಲ್ಲಿ ಬಳಸಲಾಗುವ ಲೀಥಿಯಂ-ಅಯಾನ್‌ ಬ್ಯಾಟರಿಗಳನ್ನು ಆವಿಷ್ಕರಿಸಿದ ಮೂವರು ವಿಜ್ಞಾನಿಗಳಿಗೆ 2019ರ ರಸಾಯನಶಾಸ್ತ್ರ ನೊಬೆಲ್‌ ಪ್ರಶಸ್ತಿ ಘೋಷಣೆಯಾಗಿದೆ.

ಅಮೆರಿಕದ ಜಾನ್‌ ಗುಡ್‌ಎನಫ್‌, ಬ್ರಿಟನ್‌ನ ಸ್ಟ್ಯಾನ್ಲೀ ವಿಟ್ಟಿಂಗ್‌ಹ್ಯಾಂ ಹಾಗೂ ಜಪಾನ್‌ನ ಅಕೀರಾ ಯೊಶಿನೊ ಅವರು ಕೆಮಿಸ್ಟ್ರಿ ನೊಬೆಲ್‌ಗೆ ಭಾಜನರಾದವರು. ಇವರಲ್ಲಿ ಜಾನ್‌ ಗುಡ್‌ಎನಫ್‌ 97 ವರ್ಷ ವಯಸ್ಸಿನವರಾಗಿದ್ದು, ಈ ಪ್ರಶಸ್ತಿ ಪಡೆದ ಅತಿ ಹಿರಿಯ ವ್ಯಕ್ತಿ ಎನ್ನಿಸಿಕೊಂಡಿದ್ದಾರೆ. ಪ್ರಶಸ್ತಿಯು 9.14 ಲಕ್ಷ ಡಾಲರ್‌ ಬಹುಮಾನ ಹೊಂದಿದ್ದು, ಎಲ್ಲರಿಗೂ ಸಮನಾಗಿ ಹಂಚಲಾಗುತ್ತದೆ.

ಕಾಸ್ಮೋಲಾಜಿಗೆ ಭೌತಶಾಸ್ತ್ರದ ನೊಬೆಲ್: ಹೇಳ್ಲಿಲ್ವಾ ದಿಗಂತವೇ ಪವರ್‌ಫುಲ್!

ಲೀಥಿಯಂ-ಅಯಾನ್‌ ಬ್ಯಾಟರಿಗಳ ಬಳಕೆ ಆರಂಭವಾದ ಬಳಿಕ, ಮಾಲಿನ್ಯಕಾರಕ ಫಾಸಿಲ್‌ ಇಂಧನದ ಬಳಕೆ ಬಹುವಾಗಿ ಕಮ್ಮಿಯಾಯಿತು. ಇದರಿಂದ ಮಾಲಿನ್ಯ ನಿಯಂತ್ರಣಗೊಂಡು ಪರಿಸರಕ್ಕೆ ನೆರವಾಯಿತು ಎಂದು ನೊಬೆಲ್‌ ಸಮಿತಿ ಶ್ಲಾಘಿಸಿದೆ.

ಸಂಶೋಧನೆ ಏನು?:

1970ರಲ್ಲಿ ವಿಶ್ವವು ತೈಲ ಬಿಕ್ಕಟ್ಟು ಎದುರಿಸಿತು. ಆಗ ವಿಟ್ಟಿಂಗ್‌ಹ್ಯಾಂ ಅವರು ನೀರಿನ ಮೇಲೆ ತೇಲುವಷ್ಟುತೆಳುವಾದ ಲೋಹ ಹೊಂದಿರುವ ಲೀಥಿಯಂನಲ್ಲಿನ ಇಂಧನದ ಮೂಲಕ ಬ್ಯಾಟರಿ ಆವಿಷ್ಕಾರಕ್ಕೆ ಯತ್ನಿಸಿದರು. ಬಳಿಕ ಗುಡ್‌ಎನಫ್‌ ಅವರು ವಿಟ್ಟಿಂಗ್‌ಹ್ಯಾಂ ಅವರ ಸಂಶೋಧನೆ ಆಧರಿಸಿ ಬೇರೆ ಲೋಹ ಬಳಸಿ 4 ವೋಲ್ಟ್‌ ಬ್ಯಾಟರಿ ಕಂಡುಹಿಡಿದರು.

ಜೀವಕೋಶಗಳ ಕುರಿತ ಸಂಶೋಧನೆಗೆ ವೈದ್ಯ ನೊಬೆಲ್‌!

ನಂತರ 1985ರಲ್ಲಿ ಜಪಾನ್‌ನ ಯೋಶಿನೊ ಅವರು ಲೀಥಿಯಂ ಅಯಾನ್‌ ಸಂಗ್ರಹಿಸಬಲ್ಲ ಕಾರ್ಬನ್‌ ಮೂಲದ ವಸ್ತುವಿನ ಮೂಲಕ ವಾಣಿಜ್ಯಿಕವಾಗಿ ಬಳಸಬಲ್ಲ ಬ್ಯಾಟರಿ ಸಂಶೋಧಿಸಿದರು. 1991ರಿಂದ ಈ ಬ್ಯಾಟರಿಗಳ ಬಳಕೆ ಆರಂಭವಾಗಿ ಇಂಧನ ಕ್ಷೇತ್ರದಲ್ಲಿ ಕ್ರಾಂತಿಯೇ ನಡೆಯಿತು. ಇವನ್ನು ಈಗ ಮೊಬೈಲ್‌ ಫೋನ್‌, ಲ್ಯಾಪ್‌ಟಾಪ್‌ ಹಾಗೂ ಇಲೆಕ್ಟ್ರಿಕ್‌ ವಾಹನಗಳ ರೀಚಾರ್ಜ್‌ಗೆ ಬಳಸಲಾಗುತ್ತದೆ ಎಂದು ಪ್ರಶಸ್ತಿ ಘೋಷಿಸಿದ ತೀರ್ಪುಗಾರರು ಹೇಳಿದ್ದಾರೆ.

 

Latest Videos
Follow Us:
Download App:
  • android
  • ios