Asianet Suvarna News Asianet Suvarna News

ಜೀವಕೋಶಗಳ ಕುರಿತ ಸಂಶೋಧನೆಗೆ ವೈದ್ಯ ನೊಬೆಲ್‌!

ಜೀವಕೋಶಗಳ ಕುರಿತ ಸಂಶೋಧನೆಗೆ ವೈದ್ಯ ನೊಬೆಲ್‌| ಕ್ಯಾನ್ಸರ್‌, ಅನೀಮಿಯಾ ಪೀಡಿತರಿಗೆ ನೆರವಾಗುವ ಸಂಶೋಧನೆ ಮಾಡಿದ್ದಕ್ಕೆ ಗೌರವ

Biologists who decoded how cells sense oxygen win medicine Nobel
Author
Bangalore, First Published Oct 9, 2019, 11:50 AM IST

ಸ್ಟಾಕ್‌ಹೋಂ[ಅ.09]: ಅಮೆರಿಕದ ಇಬ್ಬರು ಮತ್ತು ಓರ್ವ ಬ್ರಿಟಿಷ್‌ ವಿಜ್ಞಾನಿಗೆ ಈ ಸಲದ ಪ್ರತಿಷ್ಠಿತ ವೈದ್ಯಕೀಯ ನೊಬೆಲ್‌ ಪ್ರಶಸ್ತಿ ಲಭಿಸಿದೆ. ಕ್ಯಾನ್ಸರ್‌, ಅನೀಮಿಯಾ ಹಾಗೂ ಇತರ ಗಂಭೀರ ಕಾಯಿಲೆಗಳ ರೋಗಿಗಳನ್ನು ಉಪಚರಿಸಲು ನೆರವಾಗುವಂತಹ ಸಂಶೋಧನೆ ಕೈಗೊಂಡಿದ್ದಕ್ಕೆ ಇವರಿಗೆ ಈ ಗೌರವ ಪ್ರಾಪ್ತಿಯಾಗಿದೆ.

ಹಾರ್ವರ್ಡ್‌ ವಿವಿಯ ಡಾ| ವಿಲಿಯಂ ಕೇಲಿನ್‌, ಜಾನ್‌ ಹಾಪ್ಕಿನ್ಸ್‌ ವಿವಿಯ ಗ್ರಗ್‌ ಸೆಮೆಂಝಾ ಹಾಗೂ ಬ್ರಿಟನ್‌ನ ಕ್ರಿಕ್‌ ಇನ್ಸಿ$್ಟಟ್ಯೂಟ್‌ನ ಪೀಟರ್‌ ರೆಟ್‌ಕ್ಲಿಫ್‌ ಅವರೇ ನೊಬೆಲ್‌ ವಿಜೇತರು. ಇವರು 9,18,000 ಡಾಲರ್‌ ನಗದು ಬಹುಮಾನವನ್ನು ಹಂಚಿಕೊಳ್ಳಲಿದ್ದಾರೆ.

ಕಾಸ್ಮೋಲಾಜಿಗೆ ಭೌತಶಾಸ್ತ್ರದ ನೊಬೆಲ್: ಹೇಳ್ಲಿಲ್ವಾ ದಿಗಂತವೇ ಪವರ್‌ಫುಲ್!

ಸಂಶೋಧನೆ ಏನು?:

ಮಾನವರ ದೇಹದಲ್ಲಿನ ಜೀವಕೋಶಗಳು, ದೇಹದಲ್ಲಿ ಆಮ್ಲಜನಕ ಪ್ರಮಾಣವನ್ನು ಹೇಗೆ ಗ್ರಹಿಸುತ್ತವೆ ಮತ್ತು ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಪತ್ತೆ ಮಾಡಿದ್ದಕ್ಕಾಗಿ ಮೂವರು ಸಂಶೋಧಕರಿಗೆ ವೈದ್ಯಕೀಯ ನೊಬೆಲ್‌ ಪುರಸ್ಕಾರ ಪ್ರಕಟಿಸಲಾಗಿದೆ. ಈ ಸಂಶೋಧನೆಗಳು ಕೆಂಪು ರಕ್ತ ಕಣಗಳು, ಹೊಸ ರಕ್ತ ನಾಳಗಳು ಮತ್ತು ಜೀವರಕ್ಷಕ ವ್ಯವಸ್ಥೆಯನ್ನು ಮತ್ತಷ್ಟುಸುಧಾರಿಸಲು ಅನುವು ಮಾಡಿಕೊಟ್ಟಿತ್ತು. ಜೊತೆಗೆ ಕ್ಯಾನ್ಸರ್‌, ಅನೀಮಿಯಾ ಮೊದಲಾದ ರೋಗಗಳಿಗೆ ಚಿಕಿತ್ಸೆ ನೀಡಲು ಅನುವು ಮಾಡಿಕೊಟ್ಟಿತ್ತು.

ದೇಹದಲ್ಲಿನ ಆಮ್ಲಜನಕ ವ್ಯವಸ್ಥೆಯನ್ನು ಈ ರೋಗಗಳ ಸಂದರ್ಭದಲ್ಲಿ ಸರಿಪಡಿಸಲು ಹಾಗೂ ರೋಗ ನಿರೋಧಕ ವ್ಯವಸ್ಥೆಯನ್ನು ಉತ್ತೇಜಿಸುವ ಹೊಸ ಔಷಧಗಳನ್ನು ಕಂಡುಹಿಡಿಯಲು ಇವರ ಸಂಶೋಧನೆ ನೆರವಾಯಿತು’ ಎಂದು ಪ್ರಶಸ್ತಿ ಘೋಷಣೆಯ ವೇಳೆ ತಿಳಿಸಲಾಗಿದೆ.

Follow Us:
Download App:
  • android
  • ios