ಬಿಎಸ್ವೈಗೆ ತಾಕತ್ತಿದ್ರೆ ಮುಂದೆ ಬಂದು ಯುದ್ಧ ಮಾಡಲಿ ಎಂದು ಇದೇ ವೇಳೆ ಪದ್ಮನಾಭ ಪ್ರಸನ್ನ ಆಕ್ರೊಶ ವ್ಯಕ್ತಪಡಿಸಿದರು.
ಬೆಂಗಳೂರು (ಅ.28): ಕೆಜೆಪಿ ಸಂಸ್ಥಾಪಕ ಪದ್ಮನಾಭ ಪ್ರಸನ್ನ ಮೇಲೆ ಮತ್ತೆ ಮಸಿ ದಾಳಿ ನಡೆದಿದೆ. ಬೆಂಗಳೂರಿನಲ್ಲಿ ಇವತ್ತು ಪ್ರೆಸ್ಕ್ಲಬ್ಗೆ ಬಂದಿದ್ದ ಪದ್ಮನಾಭ ಪ್ರಸನ್ನ ಮೇಲೆ ಮಸಿ ದಾಳಿ ನಡೆದಿದೆ.
ಇದೇ ವೇಳೆ ಮಾತಾಡಿದ ಪದ್ಮನಾಭ ಪ್ರಸನ್ನ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ಬಾಡಿಗೆ ಗೂಂಡಾಗಳು ತಮ್ಮ ಮೇಲೆ ಮಸಿ ಎರಚಿ ಹೋದ್ರು ಎಂದು ಆರೋಪಿಸಿದ್ದಾರೆ.
ಪತ್ರಕರ್ತರ ವೇಷದಲ್ಲಿದ್ದವರ ಮೂರ್ನಾಲ್ಕು ಜನ ತಮ್ಮ ಮೇಲೆ ಏಕಾಏಕಿ ಮಸಿ ಎರಚಿದರು. ಬಿಎಸ್ವೈಗೆ ತಾಕತ್ತಿದ್ರೆ ಮುಂದೆ ಬಂದು ಯುದ್ಧ ಮಾಡಲಿ ಎಂದು ಇದೇವೇಳೆ ಪದ್ಮನಾಭ ಪ್ರಸನ್ನ ಆಕ್ರೊಶ ವ್ಯಕ್ತಪಡಿಸಿದರು.
ಸಂಸದೆ ಶೋಭಾ ಕರಂದ್ಲಾಜೆ ವಿವಾಹಿತರು ಎಂದು ಆರೋಪ ಮಾಡುವ ಸಲುವಾಗಿ ಸುದ್ದಿಗೋಷ್ಠಿ ನಡೆಸಲು ಅನುಮತಿ ಪಡೆಯಲು ಪದ್ಮನಾಭ ಪ್ರಸನ್ನ ಪ್ರೆಸ್ಕ್ಲಬ್ಗೆ ಬಂದಿದ್ದರು.
