ಚಿತ್ರದುರ್ಗ ಪೊಲೀಸ್ 'ಓಬವ್ವ ಪಡೆ' ಉದ್ಘಾಟನೆ!

First Published 25, Jul 2018, 9:56 PM IST
Obavva Force Inaugurated in Chitradurga
Highlights

ಪುಂಡರಿಗೆ ಸಿಂಹಸ್ವಪ್ನ ಈ ಓಬವ್ವ ಪಡೆ

ಚಿತ್ರದುರ್ಗ ಪೊಲೀಸ್ ಇಲಾಖೆಯ ವಿನೂತನ ಪಡೆ

ಪೂರ್ವ ವಲಯ ಐಜಿಪಿ ಶರತ್ ಚಂದ್ರ ಚಾಲನೆ  

ಚಿತ್ರದುರ್ಗ(ಜು.25): ಮಹಿಳೆಯರ ರಕ್ಷಣೆಗಾಗಿ ಚಿತ್ರದುರ್ಗ ಪೊಲೀಸ್ ಇಲಾಖೆ ವಿನೂತನ ಪಡೆ ರಚಿಸಿದೆ. 40 ಮಹಿಳಾ ಪೊಲೀಸರಿಗೆ ವಿಶೇಷ ತರಬೇತಿ ನೀಡಿ ’ಓಬವ್ವ ಪಡೆ’ ಗೆ ಚಾಲನೆ ನೀಡಲಾಗಿದೆ. 

ಓಬವ್ವ ಪಡೆಗೆ ಚಾಲನೆ ನೀಡಿ ಮಾತನಾಡಿದ ಪೂರ್ವ ವಲಯ ಐಜಿಪಿ ಶರತ್ ಚಂದ್ರ, ಮಹಿಳೆಯರ ರಕ್ಷಣೆಗೆಂದೇ ಈ ವಿಶೇಷ ಪಡೆ ರಚಿಸಲಾಗಿದ್ದು, ಪುಂಡರಿಗೆ ಸಿಂಹಸ್ವಪ್ನವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ನಗರದ ತರಾಸು ರಂಗ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವಿ.ವಿ ಜೋತ್ನ್ಸಾ, ಎಸ್ಪಿ ಶ್ರೀನಾಥ್ ಜೋಶಿ, ಸಿಇಓ ರವೀಂದ್ರ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಮತ್ತಿತರರು ಉಪಸ್ಥಿತರಿದ್ದರು.
 

loader