ಶಬರಿಮಲೆ[ಡಿ.10]: ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಸುಪ್ರೀಂಕೋರ್ಟ್‌ ಹೊರಡಿಸಿದ ಆದೇಶ ಹಾಗೂ ಆ ತರುವಾಯ ಕೇರಳದಲ್ಲಿ ನಡೆದ ಹಿಂಸಾಘಟನೆಗಳಿಂದ ಭಕ್ತರ ತೀವ್ರ ಕೊರತೆ ಎದುರಿಸುತ್ತಿದ್ದ ಇಲ್ಲಿನ ಅಯ್ಯಪ್ಪ ದೇಗುಲದತ್ತ ಕೊನೆಗೂ ಭಕ್ತಾದಿಗಳು ಮುಖ ಮಾಡಿದ್ದಾರೆ. ಕಳೆದ ಕೆಲ ದಿನಗಳಿಂದ ದೇಗುಲಕ್ಕೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ದಿನೇ ದಿನೇ ಗಣನೀಯ ಏರಿಕೆ ಕಂಡುಬರುತ್ತಿದೆ.

ಅಯ್ಯಪ್ಪ ಭಕ್ತೆಯನ್ನು ಕೇರಳ ಸರ್ಕಾರ ಬಂಧಿಸಿತೇ?

ದೇಗುಲ ಸುತ್ತಮುತ್ತಲ ಪ್ರದೇಶಗಳಲ್ಲಿ ಅತಿಯಾದ ಭದ್ರತೆ ಹಾಕಿರುವುದಕ್ಕೆ ಕೇರಳ ಹೈಕೋರ್ಟ್‌, ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ಭಕ್ತಾದಿಗಳ ತಪಾಸಣೆ ಕೆಲಸದಲ್ಲಿ ಪೊಲೀಸರು ಸ್ವಲ್ಪ ಸಡಿಲಿಕೆ ತೋರಿದ್ದರು. ಮತ್ತೊಂದೆಡೆ ಕಳೆದ 15 ದಿನಗಳಿಂದ ಶಬರಿಮಲೆ ಸೇರಿದಂತೆ ಕೇರಳದ ಯಾವುದೇ ಭಾಗಗಳಲ್ಲಿ ಅಯ್ಯಪ್ಪನ ವಿಷಯ ಸಂಬಂಧ ಯಾವುದೇ ಹಿಂಸಾಚಾರವೂ ನಡೆದಿಲ್ಲ. ಈ ಎಲ್ಲಾ ಕಾರಣಗಳಿಂದ ಸ್ವಲ್ಪ ನಿರಾತಂಕರಾಗಿರುವ ಭಕ್ತರು ಮತ್ತೆ ದೇಗುಲದತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ.

ಕೋರ್ಟ್ ಸಮಯ ಹಾಳು ಮಾಡಿದ್ದಕ್ಕೆ ಬಿಜೆಪಿ ನಾಯಕಿಗೆ ದಂಡ!

ಡಿ.3ರಂದು 79306, ಡಿ.4ಕ್ಕೆ 61037, ಡಿ.5ಕ್ಕೆ 51335, ಡಿ.6ಕ್ಕೆ 45000, ಡಿ.7ಕ್ಕೆ 85126 ಭಕ್ತಾದಿಗಳು ದೇಗುಲಕ್ಕೆ ಆಗಮಿಸಿ ದರ್ಶನ ಪಡೆದಿದ್ದಾರೆ. ಹೀಗಾಗಿ ಈ ವರ್ಷದ ವಾರ್ಷಿಕ ಯಾತ್ರೆ ಸಮಯ ಆರಂಭವಾದಾಗಿನಿಂದಲೂ ದೇಗುಲ ಸುತ್ತಮುತ್ತಲೂ ಕಾಣದಿದ್ದ ಜನಸಂದಣಿ, ಸರದಿ ಮತ್ತೆ ಕಾಣ ಸಿಕ್ಕಿದೆ.

ಕರ್ನಾಟಕದ ‘ಶಬರಿಮಲೆ’ಯಲ್ಲೂ ಮಹಿಳೆಯರಿಗಿಲ್ಲ ಎಂಟ್ರಿ! ಬಂದ್ರೆ ಕಲ್ಲಾಗ್ತಾರೆ!

ಈ ವರ್ಷ ಭಕ್ತರ ಆಗಮನ ಕಡಿಮೆ ಆದ ಹಿನ್ನೆಲೆಯಲ್ಲಿ, ಖ್ಯಾತನಾಮರ ಮೂಲಕ ಜಾಹೀರಾತು ನೀಡಿ, ಭಕ್ತರನ್ನು ಸೆಳೆಯುವ ಬಗ್ಗೆಯೂ ದೇಗುಲದ ಆಡಳಿತ ಮಂಡಳಿ ಚಿಂತನೆ ನಡೆಸಿತ್ತು.