Asianet Suvarna News Asianet Suvarna News

ಉಗ್ರ ನಿಗ್ರಹ ಸಂಸ್ಥೆಗೆ 6 ತಿಂಗಳಿಂದ ಮುಖ್ಯಸ್ಥರೇ ಇಲ್ಲ!

ರಾಷ್ಟ್ರೀಯ ಭದ್ರತಾ ಪಡೆಗೆ ಕಳೆದ 6 ತಿಂಗಳಿಂದ ಮುಖ್ಯಸ್ಥರೇ ಇಲ್ಲ | ತುರ್ತು ಪರಿಸ್ಥಿತಿ ಬಂದೊದಗಿದಾಗ ಯಾವ ರೀತಿಯ ಕಾರ್ಯಾಚರಣೆಗೆ ಮುಂದಾಗಬೇಕೆಂಬ ನಿರ್ದೇಶನ ನೀಡುವವರಿಲ್ಲದ ಸ್ಥಿತಿಯಲ್ಲಿ ಎನ್‌ಎಸ್‌ಜಿ ಇದೆ ಎಂದು ಹೇಳಲಾಗುತ್ತಿದೆ 

NSG not having a regular chief from last 6 months
Author
Bengaluru, First Published Oct 29, 2018, 1:16 PM IST

ನವದೆಹಲಿ (ಅ. 29): ದೇಶದಲ್ಲಿ ಭಯೋತ್ಪಾದನಾ ನಿಗ್ರಹಕ್ಕೆಂದೇ ಪ್ರತ್ಯೇಕವಾಗಿ ರಚಿಸಲಾಗಿರುವ ರಾಷ್ಟ್ರೀಯ ಭದ್ರತಾ ಪಡೆ(ಎನ್‌ಎಸ್‌ಜಿ)ಗೆ ಕಳೆದ ೬ ತಿಂಗಳಿಂದ ಮುಖ್ಯಸ್ಥರೇ ಇಲ್ಲ. ಇದರಿಂದಾಗಿ ತುರ್ತು ಪರಿಸ್ಥಿತಿ ಬಂದೊದಗಿದಾಗ
ಯಾವ ರೀತಿಯ ಕಾರ್ಯಾಚರಣೆಗೆ ಮುಂದಾಗಬೇಕೆಂಬ ನಿರ್ದೇಶನ ನೀಡುವವರಿಲ್ಲದ ಸ್ಥಿತಿಯಲ್ಲಿ ಎನ್‌ಎಸ್‌ಜಿ ಇದೆ ಎಂದು ಹೇಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಈ ಕುರಿತು ಕೇಂದ್ರ ಗೃಹ ಇಲಾಖೆ ಮಧ್ಯಸ್ಥಿಕೆ ವಹಿಸಿ, ಮುಖ್ಯಸ್ಥರ ನೇಮಿಸುವಂತೆ ವಿಶೇಷ ಭದ್ರತಾ ಪಡೆ ಕೇಳಿಕೊಂಡಿತ್ತು. ಮೇಜರ್ ಜನರಲ್ ಶಶಾಂಕ್ ಮಿಶ್ರಾ ಅವರು ಏಪ್ರಿಲ್‌ನಲ್ಲಿ ಪದೋನ್ನತಿ ಹೊಂದಿದ್ದರು. ಇದಾದ ನಂತರ ಎನ್‌ಎಸ್‌ಜಿ ಹುದ್ದೆಗೆ ಯಾರನ್ನೂ ನೇಮಕ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಎನ್‌ಎಸ್‌ಜಿಯ ಐಜಿಯೊಬ್ಬರಿಗೆ ಹೆಚ್ಚುವರಿಯಾಗಿ ಎನ್‌ಎಸ್‌ಜಿ ಮುಖ್ಯಸ್ಥರ ಜವಾಬ್ದಾರಿ ವಹಿಸಲಾಗಿದೆ.   

Follow Us:
Download App:
  • android
  • ios