ನ. 20ರಿಂದ ಈ ಕಾರ್ಯಕ್ರಮ ಆರಂಭಿಸಲು ಅದು ಚಿಂತಿಸಿದೆ. ಮುಂಬೈ ನಗರ ಘಟಕದ ಅಧ್ಯಕ್ಷ ಸಂಜಯ್ ನಿರುಪಮ್ ಈ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.

ಪ್ರಧಾನಿ ಮೋದಿಯವರ ರೇಡಿಯೊ ಕಾರ್ಯಕ್ರಮ ‘ಮನ್ ಕೀ ಬಾತ್ (ಮನದ ಮಾತು)’ಗೆ ಅಣಕವಾಗಿ, ‘ಮನೀ ಕೀ ಬಾತ್ (ಹಣದ ಮಾತು)’ ಎಂಬ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲು ಕಾಂಗ್ರೆಸ್ ನಿರ್ಧರಿಸಿದೆ. ನ. 20ರಿಂದ ಈ ಕಾರ್ಯಕ್ರಮ ಆರಂಭಿಸಲು ಅದು ಚಿಂತಿಸಿದೆ. ಮುಂಬೈ ನಗರ ಘಟಕದ ಅಧ್ಯಕ್ಷ ಸಂಜಯ್ ನಿರುಪಮ್ ಈ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದುಬಾರಿ ರಾಜಕೀಯ ಪ್ರಹಸನ: ಇನ್ನೊಂದೆಡೆಯಲ್ಲಿ ಮೋದಿಯವರ ನೋಟು ರದ್ದತಿ ಆದೇಶದ ಬಗ್ಗೆ ಪ್ರಸ್ತಾಪಿಸಿರುವ ಚೀನಾದ ಮಾಧ್ಯಮವೊಂದು, ಇದರ ಹಿಂದಿನ ಉದ್ದೇಶ ಈಡೇರದಿದ್ದಲ್ಲಿ ಇದೊಂದು ‘ದುಬಾರಿ ರಾಜಕೀಯ ಪ್ರಹಸನ’ವಾಗಲಿದೆ ಎಂದು ವ್ಯಂಗ್ಯವಾಡಿದೆ. ಅಲ್ಲದೆ ಇದು ‘ಅಸಹ್ಯ ಪಕ್ಷಪಾತದ ಸಂಚು’ ಆಗಿ ಪರಿಣಮಿಸಲಿದೆ ಎಂದೂ ಅಲ್ಲಿನ ಸರ್ಕಾರಿ ಮಾಧ್ಯಮ ಗ್ಲೋಬಲ್ ಟೈಮ್ಸ್ ಅಭಿಪ್ರಾಯ ಪಟ್ಟಿದೆ.

ಕಳ್ಳರಿಗೂ ಹಳೆ ನೋಟು ಬೇಡ: ನೋಟು ರದ್ದತಿಯಿಂದಾಗಿ ಮಹಾರಾಷ್ಟ್ರದಲ್ಲಿ ಕಳ್ಳರಿಗೂ ಹಳೆ ನೋಟುಗಳು ಬೇಕಾಗಿಲ್ಲ ಎಂಬುದು ವಿವಿಧ ಘಟನೆಗಳಿಂದ ಗೊತ್ತಾಗಿದೆ. ಧುಲೆ ಮತ್ತು ನಾಸಿಕ್ ಜಿಲ್ಲೆಯಲ್ಲಿ ನಡೆದ ಕಳ್ಳತನ ಮತ್ತು ದರೋಡೆ ಪ್ರಕರಣಗಳಲ್ಲಿ ಸುಲಿಗೆಕೋರರು, 500 ಮತ್ತು 1,000 ನೋಟುಗಳ ಕಂತೆಗಳನ್ನು ಮುಟ್ಟಿಯೂ ನೋಡಿಲ್ಲ ಎಂದು ವರದಿಯಾಗಿದೆ.