ಕೇಂದ್ರ ಬಜೆಟ್ ನಲ್ಲಿ ಘೋಷಿಸಿದಂತೆ 3 ಲಕ್ಷ ರೂ. ನಗದು ವ್ಯವಹಾರ ಮಿತಿಯನ್ನು 2 ಲಕ್ಷಕ್ಕೆ ಇಳಿಸಲು ಸರ್ಕಾರ ಚಿಂತನೆ ನಡೆಸಿದೆ.  2 ಲಕ್ಷಕ್ಕಿಂತ ಜಾಸ್ತಿ ನಗದು ವ್ಯವಹಾರ ನಡೆಸಿದರೆ ಅದನ್ನು ಕಾನೂನುಬಾಹಿರ ಎಂದು ಪರಿಗಣಿಸಲಾಗುತ್ತದೆ ಹಾಗೂ ದಂಡ ವಿಧಿಸಲಾಗುತ್ತದೆ ಎಂದು ಕೇಂದ್ರೀಯ ಆದಾಯ ಕಾರ್ಯದರ್ಶಿ ಹಸ್ಮುಖ್ ಆದಿಯಾ ಹೇಳಿದ್ದಾರೆ.

ನವದೆಹಲಿ (ಮಾ.21): ಕೇಂದ್ರ ಬಜೆಟ್ ನಲ್ಲಿ ಘೋಷಿಸಿದಂತೆ 3 ಲಕ್ಷ ರೂ. ನಗದು ವ್ಯವಹಾರ ಮಿತಿಯನ್ನು 2 ಲಕ್ಷಕ್ಕೆ ಇಳಿಸಲು ಸರ್ಕಾರ ಚಿಂತನೆ ನಡೆಸಿದೆ. 2 ಲಕ್ಷಕ್ಕಿಂತ ಜಾಸ್ತಿ ನಗದು ವ್ಯವಹಾರ ನಡೆಸಿದರೆ ಅದನ್ನು ಕಾನೂನುಬಾಹಿರ ಎಂದು ಪರಿಗಣಿಸಲಾಗುತ್ತದೆ ಹಾಗೂ ದಂಡ ವಿಧಿಸಲಾಗುತ್ತದೆ ಎಂದು ಕೇಂದ್ರೀಯ ಆದಾಯ ಕಾರ್ಯದರ್ಶಿ ಹಸ್ಮುಖ್ ಆದಿಯಾ ಹೇಳಿದ್ದಾರೆ.

ಕಪ್ಪುಹಣದ ಬಗ್ಗೆ ವಿಶೇಷ ತನಿಖಾ ತಂಡದ ಶಿಫಾರಸ್ಸಿನ ಮೇರೆಗೆ 3 ಲಕ್ಷಕ್ಕಿಂತ ಜಾಸ್ತಿ ನಗದು ವ್ಯವಹಾರಕ್ಕೆ ಸರ್ಕಾರ ಅವಕಾಶ ನೀಡದಿರಲು ನಿರ್ಧರಿಸಿದೆ ಎಂದು ಅರುಣ್ ಜೇಟ್ಲಿ ಬಜೆಟ್ ನಲ್ಲಿ ಘೋಷಿಸಿದ್ದರು. ಇದೀಗ ಆದಾಯ ಕಾಯ್ದೆ ತಿದ್ದುಪಡಿ ತಂದು 3 ಲಕ್ಷದಿಂದ 2 ಲಕ್ಷ ಮಿತಿಗೆ ಇಳಿಸಲು ಸರ್ಕಾರ ನಿರ್ಧರಿಸಿದೆ.ಇದು ಮುಂದಿನ ತಿಂಗಳಿಂದ ಜಾರಿಯಾಗಲಿದೆ.

2 ಲಕ್ಷಕ್ಕಿಂತ ಜಾಸ್ತಿ ನಗದು ವ್ಯವಹಾರ ನಡೆಸಿದರೆ ಶೇ.100 ರಷ್ಟು ದಂಡ ವಿಧಿಸಲಾಗುತ್ತದೆ.

ಕಪ್ಪುಹಣವನ್ನು ತಡೆಗಟ್ಟುವುದು ಮತ್ತು ದೇಶದಲ್ಲಿ ಡಿಜಿಟಲ್ ವ್ಯವಹಾರವನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.