‘ನಾನು ಬಿಜೆಪಿ ಸೇರುತ್ತೇನೆ ಎಂಬುದು ಕೇವಲ ವದಂತಿ. ಹಲವು ಹುದ್ದೆಗಳನ್ನು ನೀಡಿ ಬೆಳೆಸಿದ ಕಾಂಗ್ರೆಸ್‌ ಅನ್ನು ತೊರೆಯುವ ಪ್ರಶ್ನೆಯೇ ಇಲ್ಲ' ಎಂದು ನಟ, ಶಾಸಕ ಅಂಬರೀಶ್‌ ಸ್ಪಷ್ಟಪಡಿಸಿದ್ದಾರೆ.

ರಾಮ​ನ​ಗ​ರ: ಕೆ​ಪಿ​​ಸಿ​​ಸಿ ಅಧ್ಯ​ಕ್ಷ ಸ್ಥಾನ​ಕ್ಕೆ ನಾನು ಆಕಾಂಕ್ಷಿ ಅ​ಲ್ಲ.​ ನನ​ಗೆ ಅದ​ರ ಅನಿ​ವಾ​ರ್ಯ​ತೆ​ಯೂ ​​ಇ​ಲ್ಲ ಎಂದು ಇಂಧನ ಸಚಿವ ಡಿ.​ಕೆ.​ಶಿ​​ವ​ಕು​ಮಾ​ರ್‌ ಹೇಳಿದ್ದಾರೆ.

ಬಿಜೆಪಿ ಸೇರ್ಪಡೆ ವದಂತಿ,ಕಾಂಗ್ರೆಸ್‌ ಬಿಡಲ್ಲ: ಅಂಬಿ

ಮಂಡ್ಯ: ‘ನಾನು ಬಿಜೆಪಿ ಸೇರುತ್ತೇನೆ ಎಂಬುದು ಕೇವಲ ವದಂತಿ. ಹಲವು ಹುದ್ದೆಗಳನ್ನು ನೀಡಿ ಬೆಳೆಸಿದ ಕಾಂಗ್ರೆಸ್‌ ಅನ್ನು ತೊರೆಯುವ ಪ್ರಶ್ನೆಯೇ ಇಲ್ಲ' ಎಂದು ನಟ, ಶಾಸಕ ಅಂಬರೀಶ್‌ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಿಜೆಪಿಯ ಕೆಲ ನಾಯಕರು ನನ್ನನ್ನು ಭೇಟಿ ಮಾಡಿರುವುದು ನಿಜ. ಆದರೆ, ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುತ್ತೇನೆ ಎಂಬುದು ಕೇವಲ ವದಂತಿಯಷ್ಟೆ. ಕಾಂಗ್ರೆಸ್‌ ನನಗೆ ಹಲವು ಹುದ್ದೆಗಳನ್ನು ನೀಡಿ ಬೆಳೆಸಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. ಸಚಿವ ಸ್ಥಾನ ಹೋದ ಮಾತ್ರಕ್ಕೆ ನಾನು ಪಕ್ಷ ಬಿಡುತ್ತೇನೆ ಎನ್ನುವುದು ಯಾವ ನ್ಯಾಯ' ಎಂದರು.

ಚುನಾವಣೆಯಲ್ಲಿ ಸಿದ್ದು ಹೋರಾಟಕ್ಕೆ ಜಯ: ಗೌಡ
ಹಾಸನ: ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೋರಾಟಕ್ಕೆ ಜಯ ಲಭಿಸಿದ್ದು ಈ ಫಲಿತಾಂಶವನ್ನು ನಾವು ಸ್ವಾಗತಿಸುವುದಾಗಿ ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ. ಜಿಲ್ಲೆಯ ಆಲಗೌಡನಹಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯ ಫಲಿತಾಂಶ ವಿಧಾನಸಭೆ ಚುನಾವಣೆ ಮುನ್ಸೂಚನೆ ಅಲ್ಲ ಎಂದರು.

ದಲಿತರನ್ನು ಸಿಎಂ ಮಾಡಿಯೇ ಸಾಯುವೆ
ವಿಜಯಪುರ: ‘ರಾಜ್ಯದಲ್ಲಿ ದಲಿತರೊಬ್ಬರನ್ನು ಮುಖ್ಯ ಮಂತ್ರಿಯನ್ನಾಗಿ ಮಾಡಿಯೇ ನಾನು ಸಾಯುತ್ತೇನೆ. ಇದು ನನ್ನ ದೃಢ ಸಂಕಲ್ಪ' ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಭಾವೋದ್ವೇಗದಿಂದ ಹೇಳಿದ್ದಾರೆ. ಶುಕ್ರವಾರ ಅಂಬೇಡ್ಕರ್‌ ಅವರ 126ನೇ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ದಲಿತರು ಕೇವಲ ಕೇಂದ್ರ ಸಚಿವ, ಶಾಸಕರಾದರೆ ಸಾಲದು. ಅವರು ಮುಖ್ಯಮಂತ್ರಿಯೂ ಆಗಬೇಕಿದೆ. ನನಗೆ ಮುಖ್ಯಮಂತ್ರಿಯಾಗಬೇಕು ಎಂಬ ಕನಸು ಇಲ್ಲ. ದಲಿತರೊಬ್ಬರನ್ನು ಮುಖ್ಯಮಂತ್ರಿಯಾಗಿ ನೋಡಬೇಕು ಎಂಬುದು ನನ್ನ ಹಂಬಲ, ಮಹದಾಸೆ ಎಂದರು.