‘‘ಎನ್‌'ಎಸ್‌'ಜಿ ಸದಸ್ಯತ್ವ ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರಕ್ಕೆ ನೀಡುವ ವಿದಾಯ ಉಡುಗೊರೆಯಲ್ಲ’’ ಎಂದು ಚೀನಾದ ವಿದೇಶಾಂಗ ಸಚಿವಾಲಯ ವಕ್ತಾರ ಹುವಾ ಚುನಿಂಗ್ ಹೇಳಿದ್ದರು.

ನವದೆಹಲಿ (ಜ.19): ಪರಮಾಣು ಪೂರೈಕೆದಾರ ದೇಶಗಳ ಸಮೂಹ (ಎನ್’ಎಸ್’ಜಿ)ಯ ಸದಸ್ಯತ್ವ ಪಡೆಯುವ ಪ್ರಯತ್ನವು ಭಾರತದ ಪರಮಾಣು ಪ್ರಸರಣ ತಡೆಯ ಆಧಾರದಲ್ಲೇ ಆಗಿದೆಯೇ ಹೊರತು ಯಾವುದೇ ಉಡುಗೊರೆಯಲ್ಲವೆಂದು ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಚೀನಾಕ್ಕೆ ತಿರುಗೇಟು ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತ ಎನ್‌'ಎಸ್‌'ಜಿ ಸದಸ್ಯತ್ವ ಪಡೆಯಲು ಚೀನಾ ಅಡ್ಡಿಯಾಗಿದೆ ಎಂಬ ಅಮೆರಿಕದ ನಿಲುವಿನ ವಿರುದ್ಧ ಬೀಜಿಂಗ್ ಅಸಮಾಧಾನ ಹೊರಹಾಕಿತ್ತು. ಎನ್‌'ಎಸ್‌'ಜಿ ಸದಸ್ಯತ್ವವು ದೇಶಗಳು ನೀಡಬಹುದಾದ ವಿದಾಯ ಉಡುಗೊರೆಯಲ್ಲ ಎಂದು ಚೀನಾ ಹೇಳಿತ್ತು.

‘‘ಎನ್‌'ಎಸ್‌'ಜಿ ಸದಸ್ಯತ್ವ ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರಕ್ಕೆ ನೀಡುವ ವಿದಾಯ ಉಡುಗೊರೆಯಲ್ಲ’’ ಎಂದು ಚೀನಾದ ವಿದೇಶಾಂಗ ಸಚಿವಾಲಯ ವಕ್ತಾರ ಹುವಾ ಚುನಿಂಗ್ ಹೇಳಿದ್ದರು.

ಪರಮಾಣು ಪ್ರಸರಣ ತಡೆ ಒಪ್ಪಂದಕ್ಕೆ ಸಹಿ ಹಾಕದಿರುವ ಹಿನ್ನೆಲೆಯಲ್ಲಿ ಚೀನಾವು, ಎನ್’ಎಸ್’ಜಿ ಸದಸ್ಯತ್ವ ಪಡೆಯುವ ಪ್ರಯತ್ನಗಳನ್ನು ವಿರೋಧಿಸುತ್ತಾ ಬಂದಿದೆ. ಭಾರತವು ಎನ್’ಎಸ್’ಜಿ ಸದಸ್ಯತ್ವಕ್ಕೆ ಮನವಿ ಮಾಡಿದ ಬೆನ್ನಲ್ಲೇ ಪಾಕಿಸ್ತಾನವು ಮನವಿ ಮಾಡಿದೆ.