ಫುಟ್ಬಾಲ್ ಅಕಾಡೆಮಿಯಿಂದ ಹೊರಬರುವ ಆಟಗಾರರೆಲ್ಲಾ ಮೆಸ್ಸಿಯಂತೆ ಆಡಬೇಕು ಎಂದು ಜಾಂಗ್-ಉನ್ ಹೇಳಿದ್ದಾರೆ.
ಉತ್ತರ ಕೊರಿಯಾ(ನ.21): ಹುಚ್ಚಾಟದ ಹೇಳಿಕೆಗಳಿಂದಲೇ ಖ್ಯಾತಿಗಳಿಸಿದರುವ ಉತ್ತರ ಕೊರಿಯಾದ ಸರ್ವಾಕಾರಿ ಕಿಮ್ ಜಾಂಗ್-ಉನ್ ಮತ್ತೊಂದು ಅಂತಹ ಹೇಳಿಕೆ ನೀಡಿಯೇ ಸುದ್ದಿಯಾಗಿದ್ದಾರೆ.
ಇಲ್ಲಿನ ಪ್ಯೂಂಗ್‌ಯಾಂಗ್ ಅಂತಾರಾಷ್ಟ್ರೀಯ ಶಾಲೆಯ ಫುಟ್ಬಾಲ್ ತಂಡದ ಆಟಗಾರರನ್ನು ಉದ್ದೇಶಿಸಿ ಆಡಿದರೆ ಅರ್ಜೆಂಟೀನಾದ ಸ್ಟಾರ್ ಫುಟ್ಬಾಲಿಗ ಲಯೋನೆಲ್ ಮೆಸ್ಸಿಯಂತೆ ಆಡಿ ಇಲ್ಲವಾದಲ್ಲಿ ಪ್ರಾಣ ತ್ಯಾಗ ಮಾಡಿ ಎಂದು ಹೇಳಿದ್ದಾರೆ.
ಫುಟ್ಬಾಲ್ ಅಕಾಡೆಮಿಯಿಂದ ಹೊರಬರುವ ಆಟಗಾರರೆಲ್ಲಾ ಮೆಸ್ಸಿಯಂತೆ ಆಡಬೇಕು ಎಂದು ಜಾಂಗ್-ಉನ್ ಹೇಳಿದ್ದಾರೆ.
ಈ ಹಿಂದೆ ಜಾಂಗ್, ರಿಯೊ ಕೂಟದಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳು ಪದಕ ಗೆದ್ದಿಲ್ಲ ಎಂದು ಗಣಿಗಾರಿಕೆಯ ಕೆಲಸಕ್ಕೆ ನಿಯೋಜಿಸಿದ್ದರು.
