ಬೆಂಗಳೂರು :  ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿಚಾರವಾಗಿ ನಾಳೆ ಬಂದ್ ಮಾಡಬೇಕೋ ಬೇಡವೋ ಎನ್ನುವ ವಿಚಾರವಾಗಿ  ಇಂದು ಮಧ್ಯಾಹ್ನ ಸ್ಪಷ್ಟ ನಿರ್ಧಾರ ಹೊರ   ಬೀಳಲಿದೆ. 

ಬಂದ್ ನಡೆಸುವ ವಿಚಾರವಾಗಿ ಇಂದು ಮಧ್ಯಾಹ್ನದ ವೇಳೆ ಉತ್ತರ ಕರ್ನಾಟಕದ ಮುಖಂಡರು ಬೆಂಗಳೂರಿನಲ್ಲಿ ಸಭೆ ಸೇರಲಿದ್ದಾರೆ.  ಸಭೆಯಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತ ಅಧ್ಯಕ್ಷ ಸೋಮಶೇಖರ್ ಕೊತಂಬರಿ, ಗೌರವಾಧ್ಯಕ್ಷ ಬಸವರಾಜ ದಿಂಡೂರ ಸೇರಿ ಹಲವರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. 

ನಿನ್ನೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಹೋರಾಟಗಾರರು ಭೇಟಿ ಮಾಡಿದ್ದು ಈ ವೇಳೆ ಸಿಎಂ ಉತ್ತರ ಕರ್ನಾಟಕ ಅಭಿವೃದ್ಧಿಗೆ ಭರವಸೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಬಂದ್ ವಾಪಸು ಪಡೆಯುವ ಸಾದ್ಯತೆ ಇದೆ. 

ಮುಖ್ಯಮಂತ್ರಿ ಗಳಿಗೆ ಕಾಲಾವಕಾಶ ನೀಡಲು ಚಿಂತನೆ ನಡೆಸಿದ್ದು, ಎಲ್ಲವೂ ಕೂಡ ಕೂಡ ಇಂದು ನಡೆಯುವ ಸಭೆಯಲ್ಲಿ ತೀರ್ಮಾನವಾಗಲಿದೆ.