ಹೇರ್'ಲೈನ್ ಇಂಟರ್'ನ್ಯಾಷನಲ್ ರೀಸರ್ಚ್ ಅಂಡ್ ಟ್ರೀಟ್ಮೆಂಟ್ ಸೆಂಟರ್ ಸಂಸ್ಥೆಯ ವೈದ್ಯ ಹಾಗೂ ಸಂಶೋಧಕ ಡಾ. ದಿನೇಶ್ ಗೌಡ ಅವರು ಸುದ್ದಿಗೋಷ್ಠಿ ನಡೆಸಿ ಈ ವಿಚಾರವನ್ನು ಹಂಚಿಕೊಂಡರು.
ಬೆಂಗಳೂರು(ಡಿ. 16): ಸುಲಭವಾಗಿ ಅಡುಗೆ ಮಾಡಬಹುದು, ದೋಸೆ ಹುಯ್ಯಬಹುದು ಎಂದು ನಾವು ಕೊಳ್ಳುವ ಹಾಗೂ ಈಗೀಗ ಫ್ಯಾಷನ್ ಆಗಿರುವ ನಾನ್'ಸ್ಟಿಕ್ ತವೆ ಅಥವಾ ಟೆಫ್ಲಾನ್ ಲೇಪಿತ ಪಾತ್ರೆಗಳು ನಿಜಕ್ಕೂ ಡೇಂಜರಸ್ ಅಂತೆ. ಹಾಗಂತ ಹೊಸ ಅಧ್ಯಯನದ ವರದಿಯೊಂದು ಹೇಳುತ್ತಿದೆ. ಹೇರ್'ಲೈನ್ ಇಂಟರ್'ನ್ಯಾಷನಲ್ ರೀಸರ್ಚ್ ಅಂಡ್ ಟ್ರೀಟ್ಮೆಂಟ್ ಸೆಂಟರ್ ಸಂಸ್ಥೆಯ ವೈದ್ಯ ಹಾಗೂ ಸಂಶೋಧಕ ಡಾ. ದಿನೇಶ್ ಗೌಡ ಅವರು ನಿನ್ನೆ ಗುರುವಾರ ಸುದ್ದಿಗೋಷ್ಠಿ ನಡೆಸಿ ಈ ವಿಚಾರವನ್ನು ಹಂಚಿಕೊಂಡರು. ಸಂಸ್ಥೆಯು ಈ ನಿಟ್ಟಿನಲ್ಲಿ ಸಾಕಷ್ಟು ಅಧ್ಯಯನ ನಡೆಸಿದ್ದು, ಅದರ ವರದಿಯನ್ನು ನಿನ್ನೆ ಬಿಡುಗಡೆ ಮಾಡಿತು. ಇಂತಹ ಪಾತ್ರೆಗಳಿಂದ ಮಾಡಿದ ಅಡುಗೆಯನ್ನು ತಿಂದರೆ ಬೋಳುತಲೆ ಮೊದಲಾದ ಸಮಸ್ಯೆಗಳು ಬರುತ್ತವೆ ಎಂದು ಸಂಸ್ಥೆಯು ಅಂಕಿ-ಅಂಶಗಳ ಸಮೇತ ಎಚ್ಚರಿಸಿದೆ.
ಅಧ್ಯಯನ ವರದಿಯಲ್ಲೇನಿದೆ?
* ನಾನ್'ಸ್ಟಿಕ್ ಪಾತ್ರೆಗಳಲ್ಲಿ ಪರ್'ಫ್ಲೂರೋಟ್ಯಾನಿಕ್ ಆ್ಯಸಿಡ್ ಇರುತ್ತದೆ. ಇದು ಕೂದಲು ಉದುರಲು ಪ್ರಮುಖ ಕಾರಣವಾಗಿದೆಯಂತೆ.
* ಹೇರ್'ಲೈನ್ ಸಂಸ್ಥೆಯ ಕ್ಲಿನಿಕ್'ಗೆ ಭೇಟಿ ನೀಡಿದ ಶೇ.80ರಷ್ಟು ಜನರಿಗೆ ತಲೆಗೂದಲು ಉದುರಲು ಇದೇ ಪರ್'ಫ್ಲೂರೋಟ್ಯಾನಿಕ್ ಆ್ಯಸಿಡ್ ಅಂಶವೇ ಕಾರಣವೆಂಬುದು ತಿಳಿದುಬಂದಿದೆ.
* ಶೇ. 65ರಷ್ಟು ಜನರಲ್ಲಿ ಕೊಬ್ಬಿನಂಶ ಹೆಚ್ಚಾಗಲು ಇದೇ ಅಂಶ ಕಾರಣ.
* ಶೇ.27ರಷ್ಟು ಜನರಲ್ಲಿ ಬ್ಲಡ್ ಶುಗರ್ ಮಟ್ಟ ಹೆಚ್ಚಾಗಿದೆ
* ಶೇ.70ರಷ್ಟು ಮಹಿಳೆಯರಲ್ಲಿ ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್ ಕಂಡುಬಂದಿದೆ.
* ಶೇ. 65ರಷ್ಟು ಗಂಡಸರಲ್ಲಿ ಥೈರಾಯ್ಡ್ ಸಮಸ್ಯೆ
