ಮಾಜಿ ಪ್ರಧಾನಿ ದೇವೇಗೌಡರ ಆಶೀರ್ವಾದ ಶಿವರಾಮೇಗೌಡರೇ ಮೇಲೆ ಜಾಸ್ತಿ ಇದೆ. ಹೀಗಾಗಿ ಕೇವಲ ನಾಲ್ಕೂವರೆ ತಿಂಗಳ ಅವಧಿಗೆ ಎಂದು ಶಿವರಾಮೇಗೌಡರಿಗೆ ಈಗ ಟಿಕೆಟ್ ಕೊಡಲಾಗಿದೆ. ಇದು ದೇವೇಗೌಡರೇ ಮಾಡಿದ ತೀರ್ಮಾನ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಶಿವರಾಮೇಗೌಡರಿಗೆ ಟಿಕೆಟ್ ಇಲ್ಲ ಎಂಬುದನ್ನು ರೇವಣ್ಣ ಪರೋಕ್ಷವಾಗಿ ಹೇಳಿಬಿಟ್ಟರು.
ಮಂಡ್ಯ/ಕೆ.ಆರ್. ಪೇಟೆ(ಅ.28): ಕೇವಲ ನಾಲ್ಕೂವರೆ ತಿಂಗಳಿಗೆ ಮಾತ್ರ ಎಂಬ ಷರತ್ತು ಹಾಕಿ ಶಿವರಾಮೇಗೌಡರಿಗೆ ಟಿಕೆಟ್ ನೀಡಲಾಗಿದೆ ಎನ್ನುವ ಮೂಲ ಕ ಸಚಿವ ಎಚ್.ಡಿ. ರೇವಣ್ಣ ಮುಂದಿನ ಸಾರ್ವತ್ರಿಕ ಚುನಾವಣೆಗೆ ಶಿವರಾಮೇಗೌಡರಿಗೆ ಟಿಕೆಟ್ ಇಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದರು.
ಕೆ.ಆರ್. ಪೇಟೆ ಶ್ರೀರಂಗ ಚಿತ್ರಮಂದಿರ ಆವರಣದಲ್ಲಿ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಶಿವರಾಮೇಗೌಡರ ಪರವಾಗಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಸಚಿವ ರೇವಣ್ಣ, ಶಿವರಾಮೇಗೌಡರನ್ನು ಕಂಡ್ರೆ ನಂಗೆ ತುಂಬಾ ಹೆದರಿಕೆ ಇದೆ. ಶಿವರಾಮೇಗೌಡ್ರು ನಾಗಮಂಗಲದಿಂದ ಬಂದು ಬೆಂಗಳೂರನ್ನೇ ಆವರಿಸಿದ್ದಾರೆ. ಎಂಪಿ ಆದ ಕೂಡಲೇ ಉತ್ತರ ಪ್ರದೇಶವನ್ನೇ ಆವರಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದರು.
ಮಾಜಿ ಪ್ರಧಾನಿ ದೇವೇಗೌಡರ ಆಶೀರ್ವಾದ ಶಿವರಾಮೇಗೌಡರೇ ಮೇಲೆ ಜಾಸ್ತಿ ಇದೆ. ಹೀಗಾಗಿ ಕೇವಲ ನಾಲ್ಕೂವರೆ ತಿಂಗಳ ಅವಧಿಗೆ ಎಂದು ಶಿವರಾಮೇಗೌಡರಿಗೆ ಈಗ ಟಿಕೆಟ್ ಕೊಡಲಾಗಿದೆ. ಇದು ದೇವೇಗೌಡರೇ ಮಾಡಿದ ತೀರ್ಮಾನ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಶಿವರಾಮೇಗೌಡರಿಗೆ ಟಿಕೆಟ್ ಇಲ್ಲ ಎಂಬುದನ್ನು ರೇವಣ್ಣ ಪರೋಕ್ಷವಾಗಿ ಹೇಳಿಬಿಟ್ಟರು.
ಬಿಜೆಪಿಗೆ ಮತಕೇಳೋ ನೈತಿಕ ಹಕ್ಕಿಲ್ಲ : ಬಿಜೆಪಿಗೆ ಮಂಡ್ಯದಲ್ಲಿ ಮತ ಕೇಳೋಕೆ ನೈತಿಕ ಹಕ್ಕೇ ಇಲ್ಲ. ಮಾತೆತ್ತಿದ್ರೆ ಮಂಡ್ಯ ಬಜೆಟ್ ಅನ್ನೋ ಈ ಬಿಜೆಪಿಯವರು ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಾರೆ. ಆ ಹಕ್ಕು ಅವರಿಗೆ ಇಲ್ಲ. ಯಡಿಯೂರಪ್ಪ ಸಿಎಂ ಆಗಿ ಶಿವಮೊಗ್ಗಕ್ಕೆ ಏನು ಕೊಟ್ಟಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಶಿವಮೊಗ್ಗ ಬಿಟ್ರೆ ಬೇರೆ ಯಾವ ಜಿಲ್ಲೆ ಸಹ ಅವರ ಕಣ್ಣಿಗೆ ಕಂಡಿಲ್ಲ. ಈಗ ಬಾಯಿ ಬಡ್ಕೋತ್ತಾರೆ ಎಂದು ಲೇವಡಿ ಮಾಡಿದರು.